ಕ್ಷೇತ್ರದ ಗ್ರಾಮಗಳಲ್ಲಿ ಅವಶ್ಯಕ ಕೆಲಸ ಮಾಡುವೆ

Doing necessary work in the villages of the area
ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ಬೂದಿಹಾಳದಲ್ಲಿ ರಾಜ್ಯ ಹೆದ್ದಾರಿ-177 ವಿಜಯಪುರ-ಉಕ್ಕಲಿ-ದಿಂಡವಾರ-ಸಾಸನೂರ ರಸ್ತೆ ಕಿ.ಮೀ 42 ರಿಂದ 55ರ ವರೆಗೆ (ಆಯ್ದ ವ್ಯಾಪ್ತಿಗಳಲ್ಲಿ) ಅಂದಾಜು ಮೊತ್ತ 600 ಲಕ್ಷ ರೂಗಳಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಭೂಮಿಪೂಜೆ ನೆರವೇರಿಸಿದರು. ನಿಂಗಯ್ಯ ಸ್ವಾಮೀಜಿಗಳು, ಗುರುನಗೌಡ ಪಾಟೀಲ, ಸಚಿನ್‌ಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಗಂಗುಗೌಡ ಪಾಟೀಲ ಇತರರಿದ್ದರು.
Published on

ಹೂವಿನಹಿಪ್ಪರಗಿ: ಮತಕ್ಷೇತ್ರದ ಗ್ರಾಮಗಳಲ್ಲಿ ಅತಿ ಅವಶ್ಯಕವಾಗಿರುವ ಕೆಲಸಗಳನ್ನು ಮಾಡಲಾಗುವುದೆಂದು ಶಾಸಕ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ) ಹೇಳಿದರು.

ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ಬೂದಿಹಾಳ ಗ್ರಾಮದಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಡಿ( ಸಿ.ಆರ್.ಐ.ಎ್.ನಿಧಿ 2023-24) ರಾಜ್ಯ ಹೆದ್ದಾರಿ-177 ವಿಜಯಪುರ-ಉಕ್ಕಲಿ-ದಿಂಡವಾರ-ಸಾಸನೂರ ರಸ್ತೆಯ 42 ರಿಂದ 55 ಕಿ.ಮೀವರೆಗೆ (ಆಯ್ದ ವ್ಯಾಪ್ತಿಗಳಲ್ಲಿ) ಅಂದಾಜು ಮೊತ್ತ 600 ಲಕ್ಷ ರೂಗಳಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಯಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಇದರಿಂದ ಸ್ವಲ್ಪ ಹಿನ್ನಡೆಯಾಗಿದ್ದರೂ ಶ್ರಮವಹಿಸಿ ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.

ಬೂದಿಹಾಳ ಗ್ರಾಮದಲ್ಲಿ ಈಗಾಗಲೇ ಹಲವಾರು ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈಗೊಂಡು ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ, ತಾಂಡಾದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳನ್ನು ಮಾಡಲಾಗಿದೆ. ಈಗ ಆರಂಭಿಸಲಾಗುವ ರಸ್ತೆಯೂ ರಾಜ್ಯ ಹೆದ್ದಾರಿ ರಸ್ತೆಯಾಗಿರುವುದರಿಂದ ಕಾಮಗಾರಿಯನ್ನು ಸುಂದರ ಹಾಗೂ ಗುಣಮಟ್ಟದ ಕಾಮಗಾರಿ ಮಾಡಿ ನಿಗದಿತ ಅವಧಿಯಲ್ಲಿ ಮುಕ್ತಾಯ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಬಹುದಿನಗಳಿಂದ ನನೆಗುದಿಗೆ ಬಿದ್ದರಿರುವ ಲಿಂಗಸೂಗುರು-ಸಿರಾಡೋಣ ರಸ್ತೆ ಮಂಜೂರಿಗಾಗಿ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮುಖಂಡರಾದ ನಿಂಗಯ್ಯ ಸ್ವಾಮೀಜಿಗಳು, ಗುರುನಗೌಡ ಪಾಟೀಲ, ಸಚಿನ್‌ಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಗಂಗುಗೌಡ ಪಾಟೀಲ, ಅಕ್ಷಯ ಗಬ್ಬುರ, ಶ್ರೀಮಂತ ಜೋಗಿ, ಮಾಳಪ್ಪ ಜೈನಾಪುರ, ವಿಜಯಾನಂದ ಪಾಟೀಲ, ಶಿವಲಿಂಗಯ್ಯ ಹಿರೇಮಠ, ಮುಸಾ ಕಾಚಾಪುರ, ಆನಂದ ತಾಳಿಕೋಟಿ, ಗುತ್ತಿಗೆದಾರ ಎಸ್.ಐ. ಡೋಣೂರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net