ಒಳ್ಳೆಯದು ಮಾಡುವುದೇ ನಿಜ ಧರ್ಮ

kldg-19-2
ಚಿಕ್ಕಶೆಲ್ಲಿಕೇರಿಯ ಎಂ.ಐ.ಹುರಕಡ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ದಾನಿ ಆರ್.ಆರ್.ಗೌಡರ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳನ್ನು ವಿತರಿಸಿದರು.ಮಾಜಿ ಶಾಸಕ ಜೆ.ಟಿ.ಪಾಟೀಲ.ಅಡೆವೆಪ್ಪ ಶಾಸ್ತ್ರೀಗಳು, ಹೊಳೆಬಸಪ್ಪ ಬೂದಿಹಾಳ, ಆರ್.ಆರ್.ಗೌಡರ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಹಡಪದ ಇತರರಿದ್ದರು.
Published on

ಕಲಾದಗಿ: ಸರ್ಕಾರ ಶಾಲೆಗೆ ನೀಡುವ ಸೌಲಭ್ಯಗಳೊಂದಿಗೆ ದಾನಿಗಳು ನೀಡುವ ವಸ್ತುಗಳಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಸಮೀಪದ ಚಿಕ್ಕಶೆಲ್ಲಿಕೇರಿಯ ಎಂ.ಐ.ಹುರಕಡ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಗ್ರಾಪಂ ಸದಸ್ಯ ಆರ್.ಆರ್.ಗೌಡರ ಅವರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರ್ಹರಿಗೆ ಉಪಯೋಗವಾಗುವುದನ್ನು ದಾನ ಮಾಡಬೇಕು. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವುದೇ ನಿಜವಾದ ಧರ್ಮವಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆಮಾಡಿ ಇಂತಹ ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಡೆವೆಪ್ಪ ಶಾಸ್ತ್ರೀಗಳು ಹಾಗೂ ಹೊಳೆಬಸಪ್ಪ ಬೂದಿಹಾಳ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ 8ನೇ ತರಗತಿಯ 50ಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ದಾನಿಗಳಾದ ಆರ್.ಆರ್.ಗೌಡರ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಹಡಪದ, ಪ್ರಮುಖರಾದ ಜಿ.ಎಸ್.ಹೊರಟ್ಟಿ, ಫಕೀರಪ್ಪ ಬಿಸಾಳೆ, ಎಚ್.ಕೆ.ಗೌಡರ, ಹನುಮಂತ ಮಕಾನಿ, ರಾಮನ್ಣ ಕಟಗೇರಿ, ದುಂಡಪ್ಪ ಮಂಟೂರ, ಭೀಮನಗೌಡ ಗೌಡರ, ಕಲ್ಲಪ್ಪ ಯಂಡಿಗೇರಿ, ರಾಜು ಮರಪುರಲಿ, ಮಂಜುಗೌಡ ಗೌಡರ, ಮುಖ್ಯಶಿಕ್ಷಕ ಎಸ್.ಎಸ್.ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net