ಶ್ವಾನಗಳ ಸಂತಾನಶಕ್ತಿ ಹರಣ ಚಿಕಿತ್ಸಾ ಶಿಬಿರಕ್ಕೆ ಚಾಲನೆ

byn (1)
Published on

ಬೈಂದೂರು: ಮಧ್ವರಾಜ್ ಪ್ರಾಣಿ ಆರೈಕೆ ಟ್ರಸ್ಟ್ ಮಲ್ಪೆ, ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾ, ಫ್ರೊಡೊ ಫೌಂಡೇಶನ್, ರೋಟರಿ ಕ್ಲಬ್ ಬೈಂದೂರು, ಇನ್ನರ್ ವೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯಭವನದಲ್ಲಿ ಸೆ.14ರ ವರೆಗೆ ದೇಶಿ ತಳಿಯ ಸಾಕು ನಾಯಿಗಳಿಗೆ ಉಚಿತವಾಗಿ ಸಂತಾನಶಕ್ತಿ ಹರಣ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಪಶುವೈದ್ಯ ಡಾ.ಶಂಕರ ಶೆಟ್ಟಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಬೀದಿ ನಾಯಿಗಳ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಹಾಗೂ ನಾಯಿಗಳು ಆರೋಗ್ಯವನನ್ನು ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಶಿಬಿರ ಆಯೋಜಿಸುತ್ತಿರುವುದು ಸಕಾಲಿಕವಾದುದು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು, ರೋಟರಿ ಸಹಾಯಕ ಗವರ್ನರ್ ಐ.ನಾರಾಯಣ, ಇನ್ನರ್‌ವೀಲ್ ಅಧ್ಯಕ್ಷೆ ಶಾರದಾ ಕೆ., ಕಾರ್ಯದರ್ಶಿ ಚೈತ್ರಾ ಯಡ್ತರೆ, ಪಟ್ಟಣ ಪಂಚಾಯಿತಿಯ ಸಂತೋಷ್, ರವಿರಾಜ್, ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾದ ಡಾ.ಚೇತನ್, ಡಾ.ಪ್ರದೀಪ್, ಪ್ರೋಡೋ ಫೌಂಡೇಶನ್‌ನ ಶ್ವೇತಾ ಆರ್.ಎಂ., ತೇಜಸ್ವಿನಿ ಮುಂಜೂಷಾ, ನಿರ್ಮಲಾ ಉಪಸ್ಥಿತರಿದ್ದರು. ಪ್ರೋಡೋ ಫೌಂಡೇಶನ್ ಮುಖ್ಯಸ್ಥ ತನ್ವೀರ್ ತಾಜ್ ಸ್ವಾಗತಿಸಿದರು.

ಪ್ರಿಯಾಂಕಾ ಜೆನಾ ತಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಶಿಬಿರದಲ್ಲಿ 150 ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಹಾಗೂ ಲಸಿಕೆ ಸೌಲಭ್ಯ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net