

ಮೈಸೂರು: ಮಲೆ ಮಹದೇಶ್ವರ ಸಂಸ್ಥೆಯಿಂದ ಸಿದ್ದಾರ್ಥ ಬಡಾವಣೆಯ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಸೆ.16ರಂದು ಆಯೋಜಿಸಿರುವ ವಿವಿಧ ಶ್ವಾನ ಪ್ರದರ್ಶನದ ಭಿತ್ತಿಪತ್ರವನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.
ನಗರ ಪಾಲಿಕೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಪ್ರಚಾರದ ಸಾಮಗ್ರಿ ಬಿಡುಗಡೆಗೊಳಿಸಿದ ಶಾಸಕ ಟಿ.ಎಸ್.ಶ್ರೀವತ್ಸ, ಬದುಕಿನ ಭದ್ರತೆ ಜತೆಗೆ ನಿಷ್ಠೆ, ಸ್ನೇಹಕ್ಕೆ ಶ್ವಾನಗಳು ಹೆಸರುವಾಸಿಯಾಗಿವೆ. ಮಾನವ ಸಹೋದ್ಯೋಗಿಗಳು ಮತ್ತು ಬಂಧುಗಳೊಂದಿಗೆ ಸ್ನೇಹದ ಭಾವ ತೊರೆಯುತ್ತಿದ್ದಾನೆ. ಆದರೆ ನಾಯಿಗಳು ಜೀವನ ಪೂರ್ತಿ ಸ್ನೇಹವನ್ನು ನೀಡುವುದರ ಜತೆಗೆ ಬದುಕಿಗೆ ಭದ್ರತೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಮಲೆ ಮಹದೇಶ್ವರ ಸಂಸ್ಥೆ ಅಧ್ಯಕ್ಷ ಮಹಾನ್ ಅಚ್ಚು ಮಾತನಾಡಿ, ವಿಜೇತರಿಗೆ 3 ಅತ್ಯುತ್ತಮ ಟ್ರೋಫಿ ಹಾಗೂ ಪ್ರಮಾಣ ಪತ್ರ ಇರುತ್ತದೆ. ಅಲ್ಲದೆ ಸ್ಪರ್ಧಿಸಿದ ಎಲ್ಲ ಶ್ವಾನಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ನೋಂದಾಯಿಸಿಕೊಳ್ಳುವವರು ಮೊ. 7829340020 ಸಂಪರ್ಕಿಸಬಹುದು ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಲೋಹಿತ್, ಮುಖಂಡರಾದ ನಾಗರಾಜ್, ಮೋಹನ್, ಕಿಶೋರ್ ಇತರರು ಇದ್ದರು.