ಇಲ್ಲಿ ‘ಡೊಂಕು ಬಾಲದ ನಾಯಕ’ರದ್ದೇ ಹವಾ

dog show
Published on

ಮಂಗಳೂರು: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ‘ಡೊಂಕು ಬಾಲದ ನಾಯಕ’ರದ್ದೇ ಹವಾ! ಬಗೆ ಬಗೆಯ ಶ್ವಾನಗಳು ತಮ್ಮ ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸಿ ಜನರನ್ನು ರಂಜಿಸಿದವು.

ಕರಾವಳಿ ಕೆನೈನ್ ಕ್ಲಬ್ ವತಿಯಿಂದ ನಡೆದ ಈ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನ ಶ್ವಾನಪ್ರಿಯರ ಗಮನ ಸೆಳೆಯಿತು. ತರಹೇವಾರಿ ತಳಿಗಳ 250ಕ್ಕೂ ಅಧಿಕ ನಾಯಿಗಳು ಪ್ರದರ್ಶನದಲ್ಲಿದ್ದವು. ಒಟ್ಟು 11 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ, ಹೈದರಾಬಾದ್ ಮೊದಲಾದ ಕಡೆಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಮೂರು ವೇದಿಕೆಗಳನ್ನು ಹಾಕಲಾಗಿದ್ದು, ಬೆಸ್ಟ್ ಪಪ್ಪಿ, ಬೆಸ್ಟ್ ಫಿಮೇಲ್, ಬೆಸ್ಟ್ ಮೇಲ್, ಬೆಸ್ಟ್ ಆ್ ಬ್ರೀಡ್, ಬೆಸ್ಟ್ ಆ್ ಬೆಸ್ಟ್, ಟಾಪ್ ವಿನ್ನರ್ ಇತ್ಯಾದಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಅಂತಾರಾಷ್ಟ್ರೀಯ ತೀರ್ಪುಗಾರರಾದ ಕೊರಿಯಾದ ಚೂಂಗ್- ಗೀ- ಎಎಚ್‌ಎನ್ ಮತ್ತು ವೂಂಗ್ ಜಾಂಗ್ ಲೀ, ರಾಷ್ಟ್ರೀಯ ತೀರ್ಪುಗಾರರಾದ ಸಂಜೀತ್ ಮೊಹಂತಿ ಸೇರಿದಂತೆ ಹಲವು ತೀರ್ಪುಗಾರರು ಭಾಗವಹಿಸಿದ್ದರು. ಕರಾವಳಿ ಕೆನೈನ್ ಕ್ಲಬ್ ಅಧ್ಯಕ್ಷ ನಾಗರಾಜ್ ಶೆಟ್ಟಿ, ಉಪಾಧ್ಯಕ್ಷ ಟಿ. ಪ್ರೀತಮ್, ಕಾರ್ಯದರ್ಶಿ ಪ್ರಸಾದ್ ಐತಾಳ್, ವಿಶ್ವನಾಥ ಕಾಮತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net