ಚಿತ್ರದುರ್ಗ: ಶ್ರೀ ಮುರುಘಾ ಮಠದಲ್ಲಿ ಶುಕ್ರವಾರ ಮಧ್ಯಾಹ್ನ ಸಾಕು ಶ್ವಾನಗಳದ್ದೇ ದರ್ಬಾರ್. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಪ್ರತಿ ವರ್ಷ ಆಯೋಜಿಸುತ್ತಿರುವ ಸಾಕು ನಾಯಿಗಳ ಪ್ರದರ್ಶನ ಮತ್ತು ಸ್ಪರ್ಧೆ, ವರ್ಷದಿಂದ ವರ್ಷಕ್ಕೆ ಜನ ಪ್ರಿಯವಾಗುತ್ತಿದ್ದು, ಮೈಸೂರು, ಹರಿಹರ ದಾವಣಗೆರೆ, ಶಿವಮೊಗ್ಗ, ವಿಜಯಪುರ, ತುಮಕೂರು, ಗದಗ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ನೂರಕ್ಕೂ ಹೆಚ್ಚಿನ 20 ಅಧಿಕ ವೈವಿಧ್ಯ ತಳಿಗಳ ಸಾಕು ನಾಯಿಗಳ ಪ್ರದರ್ಶನ ಜರುಗಿತು.
ಕಾಶ್ಮೀರಿ ಮೂಲದ ಫಾಶ್ಮೀನ, ಲ್ಯಾಬ್ರಡಾರ್, ಗೋಲ್ಡ್ ರಿಟ್ರೈವರ್, ಪಿಟ್‌ಬುಲ್, ಜರ್ಮನ್‌ಶಪರ್ಡ್, ರ‌್ಯಾಟ್‌ವೀಲರ್, ಬೀಗಲ್, ಸೈಬ ರಿ ಯನ್ ಹಸ್ಕಿ, ಗ್ರೇಟ್‌ಡೆನ್, ಅಮೆರಿಕನ್ ಬುಲ್ಲಿ, ಪಗ್, ಮುದೋಳ್ ಮೊದಲಾದ ತಳಿಗಳ ನಾಯಿಗಳೊಂದಿಗೆ ಅವುಗಳ ಮಾಲೀಕರು ಅತ್ಯಂತ ಹೆಮ್ಮೆಯಿಂದ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಪ್ರದರ್ಶನ ಉದ್ಘಾಟಿಸಿದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮಾನವ ಬದುಕಿನಲ್ಲಿ ಸಹಕಾರಿಯಾಗುವ ಎಲ್ಲ ಪ್ರಾಣಿಗಳನ್ನು ಸಂರಕ್ಷಿಸಬೇಕು. ಈ ಮಠದಲ್ಲೂ ನಾನಾ ಪ್ರಾಣಿಗಳನ್ನು ಕಾಣಬಹುದು. ಆನೆ,ಒಂಟೆ,ಕುದುರೆಗಳ ಜತೆಗೆ ಕಿಲಾರಿ,ಗೀರ್ ತಳಿಯ ಹಸುಗಳು, ಪರ್ಷಿಯನ್ ಬೆಕ್ಕುಗಳನ್ನು ಕಾಣಬಹುದು. ನಾಯಿ ನಿಷ್ಠೆಗೆ ಹೆಸರಾದುದು. ಮಾನವ ಬೇರೆಯವರಿಗೆ ಮೋಸ ಮಾಡಬಹುದು. ಸಾಕಿದ ನಾಯಿ ಮೋಸಮಾಡದೆ ನಿಷ್ಠೆಯಿಂದ ಇರುತ್ತದೆ. ತಾವು ದಿನವೂ ಬೆಳಗ್ಗೆ 6 ರಿಂದ 7 ರ ತನಕ ಪ್ರಾಣಿಗಳ ಜತೆ ಕಾಲ ಕಳೆಯುತ್ತೇವೆ ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ಹರಗುರು ಚರಮೂರ್ತಿಗಳು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎನ್ ಜಯಣ್ಣ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಬೆಂಗಳೂರಿನ ಇಂಜಿನಿಯರ್ ಮನೋಜ್ ಕುಮಾರ್,ಪಶು ಶಸ್ತ್ರಚಿಕಿತ್ಸಕ ಡಾ. ಕೆ.ಟಿ.ಪರಮೇಶ್, ಡಾ.ಮುರುಗೇಶ್, ಡಾ.ಪ್ರಸನ್ನ, ಡಾ.ಕೊಟ್ರೇಶ್, ಡಾ.ದರ್ಶನ್ ಹಾಗೂ ಡಾ.ಅಕ್ಷತಾ ಮತ್ತಿತರರು ಇದ್ದರು.