

ಕಲಬುರಗಿ: ನಗರದ ಜಗತ್ ಬಡಾವಣೆಯ ಸರ್ಕಾರಿ ನೌಕರರ ಭವನದ ಹತ್ತಿರದ ಕಸದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸದ ಮಧ್ಯೆ ಶಿಶುವಿನ ಶವ ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿz್ದÁರೆ. ಶಿಶುವನ್ನು ನಾಯಿ ಸೇರಿ ಇತರೆ ಪ್ರಾಣಿಗಳು ಪಾದದಿಂದ ಟೊಂಕದವರೆಗೆ ತಿಂದು ಹಾಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗು ಎಲ್ಲಿಂದ ಬಂತು ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.