ಸೆರೆ ಕಾರ್ಯಾಚರಣೆ ವೇಳೆ ಶ್ವಾನ ಸಾವು

Stray Dogs
Published on

ಪಡುಬಿದ್ರಿ: ಇಲ್ಲಿನ ಬಾಲಗಣಪತಿ ದೇವಳ ರಸ್ತೆಯ ಬೆರಂದಿಕೆರೆ ಪರಿಸರದಲ್ಲಿ ಸಾರ್ವಜನಿಕರ ಮೇಲೆ ದಾಳಿ ನಡೆಸಿ ಭೀತಿಯುಂಟು ಮಾಡಿದ್ದ ಶ್ವಾನವೊಂದನ್ನು ಸ್ಥಳೀಯ ಗ್ರಾ.ಪಂ. ಸೆರೆ ಹಿಡಿದಿತ್ತು. ಆದರೆ ಶ್ವಾನವು ತಪ್ಪಿಸಿಕೊಳ್ಳುವ ಭರದಲ್ಲಿ ಕುಣಿಕೆ ಬಿಗಿಯಾಗಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಶ್ವಾನದ ಉಪಟಳ ತಾಳಲಾರದೆ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಅದರಂತೆ ಗ್ರಾಪಂ ಅಧ್ಯಕ್ಷೆ ಶಶಿಕಲಾ ಪೂಜಾರಿ ಹಾಗೂ ಪಿಡಿಒ ಮಂಜುನಾಥ ಶೆಟ್ಟಿ ಶ್ವಾನ ಸೆರೆಗೆ ಸೂಚಿಸಿದ್ದರು. ತಂಡವೊಂದು ಕಾರ್ಯಾಚರಣೆ ನಡೆಸಿ ಶ್ವಾನವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ರೋಷದಿಂದಿದ್ದ ಶ್ವಾನವು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಹಗ್ಗದ ಕುಣಿಕೆ ಬಿಗಿಯಾಗಿ ಮೃತಪಟ್ಟಿದೆ. ಈ ಶ್ವಾನವು ಈಗಾಗಲೇ 13ಕ್ಕೂ ಅಧಿಕ ಮಂದಿ ಮೇಲೆ ದಾಳಿ ನಡೆಸಿದ್ದು, ಇತ್ತೀಚೆಗಷ್ಟೇ ಶಾಲಾ ಬಾಲಕಿಯೊಬ್ಬಳಿಗೆ ಕಚ್ಚಿ ಗಂಭೀರ ಗಾಯಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net