ನಾಯಿ ಅಡ್ಡ ಬಂದಿದ್ದರಿಂದ ಬೈಕ್​ನಿಂದ ಬಿದ್ದು ಸವಾರ ದುರ್ಮರಣ

Bike Accident_2
Published on

ಹಾವೇರಿ: ದಾರಿಯಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್​ನಿಂದ ಬಿದ್ದು ಸವಾರ ಮೃತಪಟ್ಟ ಟನೆ ತಾಲೂಕಿನ ಕಳ್ಳಿಹಾಳ ಗ್ರಾಮದ ಬಳಿ ಸೋಮವಾರ ನಡೆದಿದೆ.
ತಾಲೂಕಿನ ಕನವಳ್ಳಿ ಗ್ರಾಮದ ಸಂಜೀವ ಬ್ರಹ್ಮಪ್ಪ ಬಳಿಗಾರ (53) ಮೃತ ಬೈಕ್​ ಸವಾರ.
ಇವರು ಹಾವೇರಿಯಿಂದ ಕನವಳ್ಳಿಗೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ನಾಯಿ ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋಗಿ ಬೈಕ್​ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಸಂಜೀವ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net