ಉಪಚರಿಸಲು ಬಂದ ಪೊಲೀಸ್‌ಗೆ ಕಚ್ಚಿದ ನಾಯಿ!

police
Published on

ಉಳ್ಳಾಲ: ಅಪಘಾತದಿಂದ ಗಾಯಗೊಂಡು ನೇತ್ರಾವತಿ ಸೇತುವೆಯಲ್ಲಿ ಬಿದ್ದಿದ್ದ ನಾಯಿಯನ್ನು ಉಪಚರಿಸಲು ಹೋದ ಟ್ರಾಫಿಕ್ ಪೊಲೀಸ್ ಮತ್ತು ಇಬ್ಬರು ನಾಗರಿಕರಿಗೆ ಗಾಯಗೊಂಡಿದ್ದ ನಾಯಿಯೇ ಕಡಿದ ಪ್ರಕರಣ ನಡೆದಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸ್ ಕಾನ್‌ಸ್ಟೆಬಲ್ ಮಹೇಶ್ ಆಚಾರ್ಯ ಮತ್ತು ಇಬ್ಬರು ನಾಗರಿಕರಿಗೆ ನಾಯಿ ಕಡಿದಿದೆ. ಟ್ರಾಫಿಕ್ ಗಸ್ತಿನಲ್ಲಿದ್ದ ಮಹೇಶ್ ಅವರು ಶನಿವಾರ ಬೆಳಗ್ಗೆ ನೇತ್ರಾವತಿ ಸೇತುವೆಯಲ್ಲಿ ಹೋಗುತ್ತಿದ್ದಾಗ ನಾಯಿಯೊಂದು ಗಾಯಗೊಂಡಿರುವುದನ್ನು ಗಮನಿಸಿ ಉಪಚರಿಸಲು ಮುಂದಾದರು. ಈ ಸಂದರ್ಭ ನೋವಿನಿಂದ ನರಳುತ್ತಿದ್ದ ನಾಯಿ ಆಕ್ರೋಶಿತವಾಗಿದ್ದು, ಮಹೇಶ್‌ಗೆ ಕಡಿದು ಗಾಯಗೊಳಿಸಿದೆ. ಅವರ ಸಹಾಯಕ್ಕೆ ಬಂದಿದ್ದ ಇಬ್ಬರು ನಾಗರಿಕರಿಗೂ ನಾಯಿ ಕಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net