ಐನಾಪೂರ, ಬೆನಕಪಳ್ಳಿಯಲ್ಲಿ ಹುಚ್ಚು ನಾಯಿ ಕಾಟ,13 ಜನರಿಗೆ ಕಚ್ಚಿದ ಶ್ವಾನ

IMG-20230910-WA0002
Published on

ಚಿಂಚೋಳಿ: ತಾಲೂಕಿನ ಬೆನಕಪಳ್ಳಿ ಹಾಗೂ ಐನಾಪೂರದಲ್ಲಿ ಹುಚ್ಚು ನಾಯಿ ಕಾಟ ವಿಪರೀತವಾಗಿದ್ದು, ಶನಿವಾರ ರಾತ್ರಿ 13 ಜನರಿಗೆ ನಾಯಿ ಕಡಿದಿದ್ದು, ಚಿಕಿತ್ಸೆಗಾಗಿ ಪರದಾಡುವಂತಯಿತು.

ಬೆನಕೆಪಳ್ಳಿ ಗ್ರಾಮದ ಹೊಲದಲ್ಲಿ ಓರ್ವ ವ್ಯಕ್ತಿಗೆ ಕುಡಿದು ಐನಾಪೂರಕ್ಕೆ ಧಾವಿಸಿ 12 ಜನರಿಗೆ ಕಚ್ಚಿ ಹುಚ್ಚಾಟ ಮೆರೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಕಡಿತಕ್ಕೆ ಒಳಗಾದವರು ತಕ್ಷಣವೇ ಐನಾಪೂರದ ಪ್ರಾಥಮಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು, ಡಾ.ಜುಬೇರ್ ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ತೆರಳುವಂತೆ ಸೂಚಿಸಿದ್ದಾರೆ.

ತಡರಾತ್ರಿ ನಡೆದ ಘಟನೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಸುಮಾರು 2ಗಂಟೆಗೂ ಅಧಿಕ ಅಂಬುಲೆನ್ಸ್ ಬರುವಿಕೆಗಾಗಿ ಪರದಾಡಿದ್ದಾರೆ. ನಂತರ ಕೆಲವರು ಅಂಬುಲೆನ್ಸ್ ನಲ್ಲಿ ತೆರಳಿದರೆ, ಇನ್ನೂ ಕೆಲವರು ಖಾಸಗಿ ವಾಹನಗಳಲ್ಲಿ ಕಲಬುರ್ಗಿ ಜಿಮ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೆರವಿಗೆ ಬಂದ ಚಿಟಗುಪ್ಪಾ ಆಸ್ಪತ್ರೆ ಆಂಬುಲೆನ್ಸ್: ಐನಪುರ ಹಾಗೂ ಬೆನಕಪಳ್ಳಿ ಗ್ರಾಮಸ್ಥರು ನಿರಂತರವಾಗಿ ಆಂಬುಲೆನ್ಸ್ನೆ ರೆಯ ಬೀದರ್ ಜಿಲ್ಲೆಯ ಚಿಟಗುಪ್ಪಾ ಆಸ್ಪತ್ರೆಯ ಆಂಬುಲೆನ್ಸ್ ಗಳಿಗೆ ಕರೆ ಮಾಡಿದರು. ಆದರೂ ಕಲಬುರಗಿ ಯಾವುದೇ ಆಂಬುಲೆನ್ಸ್ ನೆರವಿಗೆ ಬರಲಿಲ್ಲ. 2ಗಂಟೆ ನಂತರ ಬೀದರ್ಕ ಜಿಲ್ಲೆಯ ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ನಾಯಿ ಕಡಿತಕ್ಕೆ ಒಳಗದವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯಿತು ಎಂದು ಗ್ರಾಮಸ್ಥ ಶಿವಾನಂದ ಮಾಲಿ ಪಾಟೀಲ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net