ದೇಗಲಮಡಿಯಲ್ಲಿ 10 ಜನರಿಗೆ ಕಚ್ಚಿದ ಹುಚ್ಚು ನಾಯಿ

0ce8ea98-6b26-41d2-b035-64738b92dff4
Published on

ಚಿಂಚೋಳಿ: ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತದಿಂದ ಗಾಯಗೊಂಡಿರುವ 10ಕ್ಕೂ ಅಧಿಕ ಜನರು ಚಿಂಚೋಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಗಲ್ಮಡಿ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ಹುಚ್ಚು ನಾಯಿ ಕಡಿತ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಶಾಲೆಗೆ ಹೋಗುವ ವಿದ್ಯಾರ್ಥಿ ಶ್ರಾವಣಿ ತಂದೆ ಸಿದ್ದಲಿಂಗ, ಸಂಜನಾ ತಂದೆ ರಮೇಶ್ ಹಾಗೂ ಬಹಿರ್ದೆಸೆಗೆ ಹೋಗಿದ್ದ ಮಲ್ಲಮ್ಮ ಶಿವರಾಯ ಹಾಗೂ ಹೋಟೇಲ್ ಬಳಿ ಕುಳಿತ ಮಾಣಿಕರೆಡ್ಡಿ ತುಮಕುಂಟಾ, ವಾಲಿ ತಂದೆ ಗೌತಮ್, ಜಗನ್ನಾಥ ಸಿರಗೊಂಡ, ಮಲ್ಲಪ್ಪ ಜೊತಗೊಂಡ ಸೇರಿದಂತೆ ಅನೇಕರಿಗೆ ನಾಯಿ ಕುಡಿದ ಪರಿಣಾಮ ಚಿಂಚೋಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net