

ಬೆಂಗಳೂರು: ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತಲೇ ಇರುವ ಲವ್ ಜಿಹಾದ್ ಬೆನ್ನಿಗೇ ಈಗ ಮತ್ತೊಂದು ಜಿಹಾದ್ ಕುರಿತ ಅನುಮಾನಗಳು ಮೂಡಿವೆ. ಹೌದು.. ಅದು ಬೇರೇನೂ ಅಲ್ಲ, ಜಮೀನ್ ಜಿಹಾದ್. ಹೀಗೊಂದು ಜಿಹಾದ್ ನಡೆಯುತ್ತಿದೆ ಎಂಬುದಾಗಿ ಹಿಂದೂ ಯುವಕನೊಬ್ಬ ವಿಡಿಯೋ ಮೂಲಕ ಗಮನ ಸೆಳೆದಿದ್ದಾನೆ.
ರಾಮನಗರ ಜಿಲ್ಲೆಯ ಕನಕಪುರ ವೆಂಟರಾಯನ ದೊಡ್ಡಿಯಲ್ಲಿರುವ ಗಂಗರಸರ ಕಾಲದ ಸುಮಾರು 2000 ವರ್ಷಗಳ ಇತಿಹಾಸ ಇರುವ ವೀರಭದ್ರೇಶ್ವರ ದೇವಸ್ಥಾನದ ಮೇಲೆ 786 ಎಂದು ಬರೆದಿದ್ದಲ್ಲದೆ, ಅದನ್ನು ಅತಿಕ್ರಮಿಸುವ ಯತ್ನ ಜಾರಿಯಲ್ಲಿದೆ ಎಂದು ಈ ಯುವಕ ವಿಡಿಯೋ ಮೂಲಕ ಗಮನ ಸೆಳೆದಿದ್ದಾನೆ.
ಈ ಊರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇರದಿದ್ದರೂ ದರ್ಗಾ ನಿರ್ಮಿಸಲಾಗಿದೆ. ಸರ್ವೇ ನಂ. 30ರಲ್ಲಿ ಇರುವ ಈ ಜಾಗ ವಿ.ಸಿ. ಮರಿಗೌಡ, ಕೆ. ನಾರಾಯಣಗೌಡ, ಮುಕುಂದ ಅಯ್ಯರ್, ಚಿಕ್ಕೋಳಮ್ಮ, ಸಂಜೀವ್ ಕುಮಾರ್ ಬಿನ್ ಕೃಷ್ಣಂರಾಜು ಅವರಿಗೆ ಸೇರಿದ್ದಾಗಿದ್ದು, ಜಾಗದ ಮಾಲೀಕರ ಸ್ಥಳೀಯವಾಗಿ ಇರದ್ದರಿಂದ ಅಕ್ರಮವಾಗಿ ದರ್ಗಾ ಕಟ್ಟಲಾಗಿದೆ ಎಂದು ಈ ಯುವಕ ಆರೋಪಿಸಿದ್ದಾನೆ.
ಮಾಲೀಕರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿರುವ ಈ ಯುವಕ, ಕಾನೂನುಪ್ರಕಾರವಾಗಿ ಈ ದೇವಸ್ಥಾನವನ್ನು ಉಳಿಸಿಕೊಳ್ಳಲು ವಕೀಲ ಬಾಂಧವರು ಮುಂದೆ ಬರಬೇಕು ಎಂದು ಕೋರಿಕೊಂಡಿದ್ದಾನೆ. ಇದೇ ರೀತಿ ಹಲವೆಡೆ ಜಮೀನ್/ಲ್ಯಾಂಡ್ ಜಿಹಾದ್ ನಡೆಯುತ್ತಿದ್ದು, ಹಿಂದೂಗಳು ಎಚ್ಚರ ವಹಿಸಬೇಕು ಎಂಬುದಾಗಿ ಈ ಯುವಕ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.