ದೊಡ್ಡನಗೌಡ ಪಾಟೀಲ್ ಗೆಲವು 101 ತೆಂಗಿನಕಾಯಿ ಹೊಡೆದು ಹರಕೆ ಸಲ್ಲಿಕೆ

harake
ದೊಡ್ಡನಗೌಡ ಪಾಟೀಲ್ ಶಾಸಕರಾಗಿ ಆಯ್ಕೆಯಾಗಿದ್ದರಿಂದ ಶ್ರೀ ಹನಮಂತ ದೇವರಿಗೆ ಬಿಜೆಪಿ ಕಾರ್ಯಕರ್ತರು ತಾವರಗೇರಾ ಸಮೀಪದ ಜುಮಲಾಪೂರ ಗ್ರಾಮದಲ್ಲಿ ಸೋಮವಾರ 101 ತೆಂಗಿನಕಾಯಿ ಹೊಡೆದು ಮೂಲಕ ಹರಕೆ ತಿರಿಸಿದರು.
Published on

ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದಲ್ಲಿ ದೊಡ್ಡನಗೌಡ ಪಾಟೀಲ್ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಐನಾಪೂರ ಶ್ರೀ ಹನಮಂತ ದೇವರಿಗೆ 101 ತೆಂಗಿನಕಾಯಿ ಹೊಡೆದು ಹರಕೆ ತಿರಿಸಿದರು.


ಕುಷ್ಟಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೊಡ್ಡನಗೌಡ ಪಾಟೀಲ್ ಗೆಲುವು ಸಾಧಿಸಿದರೆ 101 ಕಾಯಿ ಹೊಡೆಸುವುದಾಗಿ ಐನಾಪೂರ ಶ್ರೀ ಹನಮಂತ ದೇವರಿಗೆ ಹರಕೆ ಹೊತ್ತಿದ್ದರು. ದೊಡ್ಡನಗೌಡ ಪಾಟೀಲ್ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಜುಮಲಾಪೂರ ಗ್ರಾಮದ ಬಿಜೆಪಿ ಕಾರ್ಯಕರ್ತರು ಸೋಮವಾರ ಬೆಳಗ್ಗೆ ಶ್ರೀ ಹನಮಂತ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಹೊಡೆದು ಹರಕೆ ತಿರಿಸಿದರು.

ಮುಖಂಡರಾದ ನಾಗರಾಜ ಬಳ್ಳಾರಿ, ಯಲ್ಲಾಲಿಂಗ ಕುರಿ, ಬಸವರಾಜ ಹೊಸಪೇಟೆ, ರಾಮಣ್ಣ ಕೆರಿಹೋಲ. ದೊಡ್ಡಬಸವ,ರಮೇಶ ಗೋನಾಳ, ನಿಂಗಪ್ಪ ಕುರಿ, ಪಾಂಡಪ್ಪ ಕುರಿ, ಬಸವರಾಜ ಕುರಿ ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net