ಸೇವಾ ಚಟುವಟಿಕೆ ಸಮಾಜಕ್ಕೆ ಮಾದರಿ : ಲೋಗೋ ಬಿಡುಗಡೆಗೊಳಿಸಿ ಸುದರ್ಶನ್ ಎಂ. ಶ್ಲಾಘನೆ

New Project (42)
Published on

ಮೂಡುಬಿದಿರೆ: 9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡ ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ ದೇವರ ಹಾಗೂ ಶ್ರೀ ಗೌರಿ ದೇವರ ಜಾತ್ರಾ ಮಹೋತ್ಸವದ ಸಂದರ್ಭ ಮಾಡುತ್ತಿರುವ ಸೇವಾ ಚಟುವಟಿಕೆ ಮಾದರಿ. ಚಂದ್ರಶೇಖರ ದೇವರ ಪುಷ್ಕರಣಿ ನೂರಾರು ವರ್ಷಗಳಿಂದ ಪಾಳು ಬಿದ್ದ ಪರಿಸ್ಥಿತಿಯಲ್ಲಿದ್ದು, ಅದರ ಮರು ನಿರ್ಮಾಣದ ಕಾರ್ಯವನ್ನು ತಂಡ ಮಾಡಿರುವುದು ಶ್ಲಾಘನೀಯ ಎಂದು ಬಿಜೆಪಿ ದ.ಕ.ಮಾಜಿ ಅಧ್ಯಕ್ಷ ಸುದರ್ಶನ್ ಎಂ.ಹೇಳಿದರು.

ಮೂಡುಬಿದಿರೆ ಶ್ರೀಗೌರಿ ದೇವಸ್ಥಾನದಲ್ಲಿ ದೊಡ್ಮನೆ ಫ್ರೆಂಡ್ಸ್ ಬೆದ್ರ ಸಂಘಟನೆ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಸುದರ್ಶನ್ ಎಂ.ಲೋಗೋ ಅನಾವರಣ ಗೊಳಿಸಿದರು. ಶ್ರೀ ಗೌರಿ ದೇವಸ್ಥಾನದ ಆನುವಂಶಿಕ ಅರ್ಚಕ ರಾಜೇಶ್ ಭಟ್, ಬೆದ್ರ ಫ್ರೆಂಡ್ಸ್, ಮೂಡುಬಿದಿರೆ ಹೀಲಿಂಗ್ ಹ್ಯಾಂಡ್ ಚಾರಿಟೆಬಲ್ ಟ್ರಸ್ಟ್ ಪ್ರಮುಖ ಪ್ರಜ್ವಲ್ ಕುಲಾಲ್, ಸರ್ವೋದಯ ಫ್ರೆಂಡ್ಸ್ ಪ್ರಮುಖ ಪ್ರಕಾಶ್ ಕುಂದರ್, ಪವರ್ ಫ್ರೆಂಡ್ಸ್ ಪ್ರಮುಖ ಸುಧಾಕರ್ ಶೆಟ್ಟಿ, ದೊಡ್ಮನೆ ಫ್ರೆಂಡ್ಸ್ ತಂಡದ ಹಿರಿಯರಾದ ಓಮಯ್ಯ ಪೂಜಾರಿ ಉಪಸ್ಥಿತರಿದ್ದರು. ರಾಜೇಶ್ ಭಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net