

ಚಿತ್ರದುರ್ಗ: ಮಾಜಿ ಪ್ರಧಾನಿ ದೇವೇಗೌಡರು ರೈತಪರ ಹೋರಾಟ ಮಾಡಿದ್ದು, ಅಪಾರ ಗೌರವವಿದೆ. ಜಾತ್ಯತೀತ ತತ್ವದಡಿ ಅವರು ನಡೆದು ಬಂದ ಹಾದಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮವಾಗಿತ್ತು. ಆದರೀಗ ಜೆಡಿಎಸ್ ದಾರಿ ತಪ್ಪುತ್ತಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಅವರನ್ನು ಪ್ರಧಾನಿ, ಕುಮಾರಸ್ವಾಮಿ ಅವರನ್ನು ಒಮ್ಮೆ ರಾಜ್ಯದ ಸಿಎಂ ಮಾಡಿದ್ದು ಕಾಂಗ್ರೆಸ್. ಜಾತ್ಯತೀತ ಪಕ್ಷ ಹಾಗೆಯೇ ಮುಂದುವರಿಯುವ ಆಶಾಭಾವನೆ ಇತ್ತು. ಹೊಸ ನಡೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.