

ಮಂಡ್ಯ: ತಾಲೂಕಿನ ದೊಡ್ಡಗರುಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸೋಮಶೇಖರ್ ಹಾಗೂ ಕೆಂಪರಾಜು ಆಯ್ಕೆಯಾಗಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘವು ಸ್ಥಾಪನೆಯಾಗಿ 48 ವರ್ಷದಲ್ಲಿ ಏ.26ರಂದು ಪ್ರಥಮ ಬಾರಿಗೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8, ಕಾಂಗ್ರೆಸ್ ಬೆಂಬಲಿತ 3 ನಿರ್ದೇಶಕರು ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪರಾಜು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ವೆಂಕಟೇಶಮೂರ್ತಿ ಅವಿರೋಧದ ಆಯ್ಕೆಯನ್ನು ೋಷಣೆ ಮಾಡಿದರು.
ನೂತನ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತೇನೆ. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಡೇರಿಯ ನೂತನ ವರಿಷ್ಠರನ್ನು ನಿರ್ದೇಶಕರಾದ ಕರಿಗೌಡ, ಭೈರೇಗೌಡ, ದೇವರಾಜು, ಉಮೇಶ್, ಬೋರಲಿಂಗಯ್ಯ, ಪುಟ್ಟ ಲಿಂಗಯ್ಯ, ಭಾಗ್ಯಮ್ಮ, ಮೇಘನಾ, ಮುಖಂಡರಾದ ಚನ್ನಕೇಶವ, ಪಟೇಲ್ ಆನಂದ್, ರಾಜೇಗೌಡ, ಅಂಗಡಿ ಆನಂದ್, ಸಚ್ಚಿದಾನಂದ, ರಾಮೇಗೌಡ, ಕುಮಾರ, ಮನು ಅಭಿನಂದಿಸಿದರು.