ದೊಡ್ಡೂರು ಆಂಜನೇಯ ಸ್ವಾಮಿ ಜಾತ್ರೆ ಅದ್ದೂರಿ

Manvi Jatre
ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ದೊಡ್ಡೂರು ಶ್ರೀ ಆಂಜನೇಯ ಸ್ವಾಮಿ ಜಾತ್ರೆ ನಿಮಿತ್ತ ದೇವರ ಭಾವಚಿತ್ರ ಹಾಗೂ ಕಳಸ ಮೆರವಣಿಗೆ ಜರುಗಿತು.
Published on

ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ದೊಡ್ಡೂರು ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರೋತ್ಸವ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ನರಸಿಂಹರಾವ್ ಕುಲಕರ್ಣಿ ಅವರ ಮನೆಯಿಂದ ದೊಡ್ಡೂರು ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಆಂಜನೇಯ್ಯಸ್ವಾಮಿ ಭಾವಚಿತ್ರ ಹಾಗೂ ಕಳಸ ಮೆರವಣಿಗೆ ನಡೆಯಿತು. ಜಾತ್ರೆ ನಿಮಿತ್ತ ಖೋಖೋ, ವಾಲಿಬಾಲ್ ಪಂದ್ಯಾವಳಿ ಹಾಗೂ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪ್ರಮುಖರಾದ ಶಿವರಾಜ ವಕೀಲರು, ಎಂ.ಈರಣ್ಣ, ಜೆ.ಗೋಪಾಲ್ ನಾಯಕ, ಶರಣಬಸವ, ವಾರಿಸ್ ಬಾಬಾ, ಹನುಮೇಶ, ವಿರೂಪಾಕ್ಷಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net