

ಹುಬ್ಬಳ್ಳಿ: ತಾಲೂಕಿನ ಅದರಗುಂಚಿ ಶ್ರೀ ದೊಡ್ಡೇಶ್ವರ ಜಾತ್ರಾ ಮಹೋತ್ಸವ ಮಾ. 30ರಿಂದ ಏಪ್ರಿಲ್ 13ರ ವರೆಗೆ ಏರ್ಪಡಿಸಲಾಗಿದೆ.
ನಿತ್ಯ ಪ್ರವಚನ, ಧರ್ಮಸಭೆ, ಮಹಾಮಸ್ತಕ ಅಭಿಷೇಕ, ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಕಳಸಾರೋಹಣ, ಮಹಾರಥೋತ್ಸವ, ಕಡುಬಿನ ಕಾಳಗ, ಜಾನಪದ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾ. 30ರಂದು ಸಂಜೆ 6.30ಕ್ಕೆ ಅದರಗುಂಚಿಯಲ್ಲಿ ಮಾನವ ಧರ್ಮಸಭೆ, ಪ್ರವಚನ ಏರ್ಪಡಿಸಲಾಗಿದೆ. ಕಲಘಟಗಿ ಹನ್ನೇರಡು ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆತ್ಮಾನಂದ ಆಶ್ರಮದ ಸದ್ಗುರು ಕೃಷ್ಣಾನಂದ ಸ್ವಾಮೀಜಿ, ಶ್ರೀ ಶಿವರುದ್ರಯ್ಯ ಸ್ವಾಮಿ ಹಿರೇಮಠ, ಶಾಸಕ ಎಂ.ಆರ್. ಪಾಟೀಲ ಉಪಸ್ಥಿತರಿರುವರು.
ವಿರುಪಾಕ್ಷಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.
ಮಾ. 31ರಂದು ಸಂಜೆ 4ಕ್ಕೆ ಅಭಿನವ ಮಡಿವಾಳ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಸರ್ವಧರ್ಮ ಸಭೆ, ಪ್ರವಚನ ನಡೆಯುವುದು. ಕುಂದಗೋಳದ ಶ್ರೀಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸುವರು.
ಏ. 12 ಹಾಗೂ 13ರಂದು ಬೆಳಗ್ಗೆ ಮಹಾಭಿಷೇಕ, ಕಂಕಣ ಭಾಗ್ಯ ಹಾಗೂ ಸಂತಾನ ಫಲ ಉಡಿ ತುಂಬುವುದು. ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಏ. 13ರಂದು ಸಂಜೆ 5.30ಕ್ಕೆ ಕಡುಬಿನ ಕಾಳಗ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.