ವೀರಭದ್ರೇಶ್ವರ ಸ್ವಾಮಿಯ ಕೆಂಡದಾರ್ಚನೆ

26 nmt
Published on

ನ್ಯಾಮತಿ: ತಾಲೂಕಿನ ದೊಡ್ಡೇರಿ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ಮಂಗಳವಾರ ದೇಗುಲದ ಆವರಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಮುಂಜಾನೆ ಸುಮಂಗಲಿಯರಿಂದ ಗಂಗೆ ಪೂಜೆ, ವೀರಭದ್ರೇಶ್ವರ ಸ್ವಾಮಿ, ಶ್ರೀಭದ್ರಕಾಳಮ್ಮ ದೇವಿ ಹಾಗೂ ನಂದೀಶ್ವರ ಸ್ವಾಮಿಯ ಶಿಲಾಮೂರ್ತಿಗಳು ಸೇರಿ ಉತ್ಸವಮೂರ್ತಿಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮಹಾಮಂಗಳಾರತಿ ನೆರವೇರಿತು.

ಅಗ್ನಿಕುಂಡವನ್ನು ಸಾಂಪ್ರದಾಯಿಕ ಪೂಜಾವಿಧಿಗಳೊಂದಿಗೆ ಸಿದ್ಧಗೊಳಿಸಿ ಅದಕ್ಕೆ ನೈವೇದ್ಯ ಸಮರ್ಪಣೆ ಮಾಡಲಾಯಿತು. ಶ್ರೀವೀರಭದ್ರಸ್ವಾಮಿಯ ಪಲ್ಲಕ್ಕಿ ಹೊತ್ತವರು ದೇವರ ನಾಮಸ್ಮರಣೆ ಮಾಡುತ್ತಾ ಕೆಂಡದ ರಾಶಿಯನ್ನು ಹಾಯ್ದರು.

ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ನೂರಾರು ಪುರುಷರು- ಮಹಿಳೆಯರು ಮಕ್ಕಳನ್ನು ಹೊತ್ತು ಕೆಂಡವನ್ನು ಹಾಯ್ದು ಹರಕೆ ಸಲ್ಲಿಸಿದರು. ಕೆಂಡಾರ್ಚನೆಗೆ ಮಂಗಳವಾದ್ಯ, ವೀರಗಾಸೆ ಕುಣಿತ ಸಾಂಸ್ಕೃತಿಕ ವಾದ್ಯ ಮೇಳಗಳು ಮೆರುಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net