

ಹುಬ್ಬಳ್ಳಿ: ಇಲ್ಲಿಯ ಶ್ರೀ ಶಿವಲಿಂಗೇಶ್ವರ ಪುಣ್ಯಭೂಮಿ ರಾಜ ವಿದ್ಯಾಶ್ರಮದಲ್ಲಿ ಜರುಗಿದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಜನಪರ ಹೋರಾಟಗಾರ ಗಂಗಾಧರ ದೊಡ್ಡವಾಡ ಅವರಿಗೆ ಸಿದ್ಧಾಂತಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೂರು ದಶಕಗಳಿಂದ ಧಾರವಾಡ ಜಿಲ್ಲೆಯ ಸಾಮಾಜಿಕ ರಂಗ, ಅಣ್ಣ ಬಸವಣ್ಣನವರ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಗಂಗಾಧರ ಅವರು ಜನಸೇವೆ ಮಾಡುತ್ತಿರುವುದನ್ನು ಗುರುತಿಸಿ ರಾಜ ವಿದ್ಯಾಶ್ರಮದ ಪೀಠಾಧಿಪತಿ ಭಾರತಭೂಷಣ ಶ್ರೀ ಷಡಕ್ಷರಿ ಮಹಾಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಗಣ್ಯರು ಸನ್ಮಾನಿಸಿದರು.
ಶಾಸಕ ಅರವಿಂದ ಬೆಲ್ಲದ, ಲಿಂಗಾಯತ ಒಳಪಂಗಡಗಳ ಒಕ್ಕೂಟದ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ, ಕನಕದಾಸ ಮಹಾವಿದ್ಯಾಲಯದ ಉಪಾಧ್ಯಕ್ಷ ಶಾಂತಣ್ಣಾ ಕಡಿವಾಲ, ಅಹಿಂದ ರಾಷ್ಟ್ರೀಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ಚುಟುಕು ಸಾಹಿತ್ಯ ಪರಿಷತ್ತಿನ ವಿ.ಜಿ. ಪಾಟೀಲ ಇತರರು ಇದ್ದರು.