ವಚನಾನಂದ ಶ್ರೀಗಳಿಂದ ಇಷ್ಟಲಿಂಗ ಪೂಜೆ ಸೆ. 11ರಂದು

8-RNR-04
Published on

ರಾಣೆಬೆನ್ನೂರ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಸೆ. 11ರಂದು ಬೆಳಗ್ಗೆ 7 ಗಂಟೆಗೆ ನಗರದ ದೊಡ್ಡಪೇಟೆ ಪಂಚಾಚಾರ್ಯ ಸಮುದಾಯ ಭವನದಲ್ಲಿ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷ ವಸoತಾ ಹುಲ್ಲತ್ತಿ ತಿಳಿಸಿದರು.
ನಗರದ ದೊಡ್ಡಪೇಟೆ ಪಂಚಾಚಾರ್ಯ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಆಧ್ಯಾತ್ಮಿಕ ಭಾವನೆ ಹೆಚ್ಚಿಸುವ ಉದ್ದೇಶದಿಂದ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಪೂಜೆಯ ಸಾನ್ನಿಧ್ಯ ವಹಿಸುವರು ಎಂದರು.
ನಗರ ಹಾಗೂ ಗ್ರಾಮೀಣ ಭಾಗದ ಎಲ್ಲ ಸಮುದಾಯದವರು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಳ್ಳಬಹುದು. ಬರುವ ಪುರುಷರು ಬಿಳಿ ದೋತಿ ಹಾಗೂ ಮಹಿಳೆಯರು ಹಸಿರು ಸೀರೆಯುಟ್ಟು ಬರಬೇಕು ಎಂದು ತಿಳಿಸಿದರು.
ಪ್ರಮುಖರಾದ ಮಂಗಳಗೌರಿ ಪೂಜಾರ, ಗೀತಾ ಕಾಕೋಳ, ಗೀತಾ ಜಂಬಗಿ, ಶಿವಪ್ಪ ಗುರಿಕಾರ, ಉಮೇಶ ಗುಂಡಗಟ್ಟಿ, ನಾಗರತ್ನ ಗುಡಿಹಳ್ಳಿ, ರಾಜಣ್ಣ ಮೋಟಗಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net