ದೊಡ್ಡನಗೌಡ ಪಾಟೀಲ ಆರೋಪ ನಿರಾಧಾರ

Doddanagouda Patil's allegations are baseless.
ಇಳಕಲ್ಲದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ ರಜಾಕ ತಟಗಾರ ಸುದ್ದಿಗೋಷ್ಠಿ ನಡೆಸಿದರು. ಸುಧಾರಾಣಿ ಸಂಗಮ, ರಾಘು ಚಿಂಚಮಿ, ಶರಣಪ್ಪ ಆಮದಿಹಾಳ, ಅಬ್ಬು ಹಳ್ಳಿ, ಮೌಲಪ್ಪ ಬಂಡಿವಡ್ಡರ, ಅಮೃತಾ ಬಿಜ್ಜಳ, ಶಬ್ಬೀರ ಬಾಗವಾನ ಮತ್ತಿತರರಿದ್ದರು.
Published on

ಇಳಕಲ್ಲ(ಗ್ರಾ): ಶಾಸಕ ವಿಜಯಾನಂದ ಕಾಶಪ್ಪನವರ ಹುನಗುಂದ ಮತ್ತು ಇಳಕಲ್ಲನಲ್ಲಿ ಜನರಿಗೆ ಉತಾರ ಕೊಡಬೇಡಿ ಎಂದು ಹೇಳಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾಡಿದ ಆರೋಪ ನಿರಾಧಾರವಾಗಿದೆ ಎಂದು ಇಳಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ ರಜಾಕ ತಟಗಾರ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಎ ಆದ ಪ್ಲಾಟ್‌ಗಳ ಮಾಲೀಕರು ಐದು ಲಕ್ಷ ಹಣ ಅಥವಾ ಒಂದು ಪ್ಲಾಟ್ ನೀಡಬೇಕು ಎಂಬ ಆರೋಪಕ್ಕೆ ಮಾಜಿ ಶಾಸಕರು ಸಾಕ್ಷಿ ಒದಗಿಸಬೇಕು. ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಿಂದ ಕಳ್ಳರು ಊರು ಬಿಟ್ಟಿದ್ದಾರೆ ಎಂಬ ಮಾತನ್ನು ತಮ್ಮ ಮೇಲೆಕೆ ತೆಗೆದುಕೊಂಡಿದ್ದಾರೆ ಎಂದರು.

ಮುರ್ತುಜಾ ಖಾದ್ರಿ ದರ್ಗಾ ಉರಸ್‌ನ ಸಮಯದಲ್ಲಿ ಅವ್ಯವಹಾರ ನಡೆದೆದೆ ಎಂಬ ಆರೋಪದ ಬಗ್ಗೆ ಮಾತನಾಡಿ, ದರ್ಗಾಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದು ನೀವೇ ಅಲ್ಲವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘು ಚಿಂಚಮಿ, ಪಕ್ಷದ ಮುಖಂಡರಾದ ಶರಣಪ್ಪ ಆಮದಿಹಾಳ, ಅಬ್ಬು ಹಳ್ಳಿ, ಮೌಲಪ್ಪ ಬಂಡಿವಡ್ಡರ, ಅಮೃತಾ ಬಿಜ್ಜಳ, ಶಬ್ಬೀರ ಬಾಗವಾನ, ಯಲ್ಲಪ್ಪ ರಾಜಾಪೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net