ಹುಲುಸೆ ದೊಡ್ಡಮ್ಮ ದೇವರ ದ್ವೈ ವಾರ್ಷಿಕ ಪೂಜೋತ್ಸವ

doddamma
Published on

ಕುಶಾಲನಗರ:

ಕುಶಾಲನಗರ ಸಮೀಪದ ಹುಲುಸೆ ಗ್ರಾಮದ ಗ್ರಾಮದೇವತೆ ಬನದಲ್ಲಿನ ದೊಡ್ಡಮ್ಮ ದೇವರ ದ್ವೈ ವಾರ್ಷಿಕ ಪೂಜೋತ್ಸವ ಗುರುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಹುಲುಸೆ ಗ್ರಾಮದ ಬಸವೇಶ್ವರ ದೇವಾಲಯದಿಂದ ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ ದೇವಾಲಯದ ಮಾರ್ಗವಾಗಿ ಮೆರವಣಿಗೆಯಲ್ಲಿ ಹಣ್ಣುಕಾಯಿ ತುಂಬಿದ ಹಣ್ಣು ಹೆಡುಗೆಯೊಂದಿಗೆ ಚಂಡೇ ಹಾಗೂ ಮಂಗಳ ವಾದ್ಯ ಜತೆಗೆÀ ಬನದ ದೇವಾಲಯಕ್ಕೆ ತಂದು ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಯಿತು.

ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ದೇವಾಲಯದ ಮುಂಬದಿ ನಿರ್ಮಿಸಿದ್ದ ಕೊಂಡೋತ್ಸವದಲ್ಲಿ ಹರಕೆ ಹೊತ್ತ ಭಕ್ತಾಧಿಗಳು ಮಕ್ಕಳಾದಿಯಾಗಿ ಎಲ್ಲರೂ ಕೂಡ ಬರಿಗಾಲಲ್ಲಿ ಕೊಂಡ ತುಳಿದು ಹರಕೆ ತೀರಿಸಿದರು.

ಗುಮ್ಮನಕೊಲ್ಲಿ ಬಸವೇಶ್ವರ ದೇವಾಲಯದ ಅರ್ಚಕÀ ಚಂದ್ರಶೇಖರ್ ಶಾಸ್ತ್ರಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಉತ್ಸವದ ಅಂಗವಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಮದ್ದುಗುಂಡು ಉತ್ಸವ ಭಕ್ತರ ಗಮನಸೆಳೆಯಿತು.

ದೇವಾಲಯ ಸಮಿತಿ ಅಧ್ಯಕ್ಷÀ ಹೆಚ್.ಎನ್. ಶಿವನಂಜಪ್ಪ, ಕಾರ್ಯದರ್ಶಿ ಶಂಕರಾಚಾರಿ,

ಊರಿನ ಹಿರಿಯರಾದ ಶಿವರುದ್ರಪ್ಪ ಕೆಂಡ ಕೊಂಡೋತ್ಸವ ನಿರ್ವಹಿಸಿದರು.

ಸದಸ್ಯರಾದ ಹೆಚ್.ಸಿ. ರವಿ, ಹೆಚ್.ಬಿ. ಸೋಮಶೇಖರ್, ಹೆಚ್.ಎಸ್. ಬಸಪ್ಪ, ಹೆಚ್.ಕೆ. ನಂಜುAಡ, ಹೆಚ್.ಬಿ. ಮಹದೇವಪ್ಪ, ಹೆಚ್.ಎ. ರವಿ, ದಿನೇಶ್, ಹೆಚ್.ಇ. ರಾಜು, ಹೆಚ್.ಎಸ್. ಮಲ್ಲಿಕಾರ್ಜುನ, ಹೆಚ್.ಬಿ. ಚಂದ್ರಪ್ಪ, ಹೆಚ್.ವಿ. ಸೋಮಚಾರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net