

ಆಲ್ದೂರು: ಇಂದಾವರ ಗ್ರಾಮದ ಆಟದ ಮೈದಾನದಲ್ಲಿ ಭಾನುವಾರ ಇಂದಾವರ ಗೌಡಾಸ್ ಪ್ರಿಮೀಯರ್ ಲೀಗ್ ಆಯೋಜಿಸಿದ್ದ ಹೊನಲು-ಬೆಳಕಿನ ಕ್ರಿಕೇಟ್ ಪಂದ್ಯಾವಳಿಯಲ್ಲಿ ದೊಡ್ಡಮಾಗರವಳ್ಳಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ತಂಡವು ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡಿತು. ಕೊಳಗಾಮೆ ತಂಡ ದ್ವಿತೀಯ ಸ್ಥಾನ, ಇಂದಾವರ ತಂಡ ತೃತೀಯ ಸ್ಥಾನ ಪಡೆದವು. ಕಳವಾಸೆ ತಂಡ ಚತುರ್ಥ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಪಂದ್ಯದ ಉತ್ತಮ ಆಲ್‌ರೌಂಡರ್ ಆಗಿ ಬಾಳೂರು ಶರತ್, ಉತ್ತಮ ಬೌಲರ್ ಆಗಿ ದೊಡ್ಡಮಾಗರವಳ್ಳಿ ನಿತೀನ್ ಪ್ರಶಸ್ತಿ ಪಡೆದುಕೊಂಡರು. ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ 16 ತಂಡಗಳು ಸ್ಪರ್ಧಿಸಿದ್ದವು.