ಪಿಕಾರ್ಡ್ ಬ್ಯಾಂಕ್‌ಗೆ ದೊಡ್ಡಮಾದೇಗೌಡ ಅಧ್ಯಕ್ಷ

7 mlv 3
ಮಳವಳ್ಳಿ ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ದೊಡ್ಡಮಾದೇಗೌಡ ಉಪಾಧ್ಯಕ್ಷ ಹಿಟ್ಟನ ಕೊಪ್ಪಲು ವೀರೇಶ್ ಅವರನ್ನು ಮುಖಂಡರು ಅಭಿನಂದಿಸಿದರು. ರವಿ ಕಂಸಾಗರ, ವಿ.ಎಂ.ವಿಶ್ವನಾಥ್, ಚಂದಳ್ಳಿ ಶ್ರೀಧರ್, ಶಿವಮಲ್ಲಪ್ಪ, ಮಾಯಣ್ಣ, ಹನುಮಂತು, ತಮ್ಮಡಹಳ್ಳಿ ಈರಪ್ಪ, ಲೋಕೇಶ್(ಕೆಂಪಲಿಂಗು) ಹುಲ್ಲಳ್ಳಿ ಮನು, ಶಿವಕುಮಾರ, ಕೆಂಚೇಗೌಡ ಇದ್ದರು.
Published on

ಮಳವಳ್ಳಿ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ(ಪಿಕಾರ್ಡ್) ಬ್ಯಾಂಕ್ ನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಆಲದಹಳ್ಳಿ ದೊಡ್ಡಮಾದೇಗೌಡ, ಉಪಾಧ್ಯಕ್ಷರಾಗಿ ಹಿಟ್ಟನ ಕೊಪ್ಪಲು ವೀರೇಶ್ ಆಯ್ಕೆಯಾದರು.

ಪಟ್ಟಣದ ಬ್ಯಾಂಕ್‌ನ ಸಭಾಂಗಣದಲ್ಲಿ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ

ಮತದಾನದ ಹಕ್ಕು ಹೊಂದಿದ್ದ 14 ನಿರ್ದೇಶಕರು ಹಾಗೂ ಒಬ್ಬ ನಾಮ ನಿರ್ದೇಶಕ ಸೇರಿ ಒಟ್ಟು 15 ನಿರ್ದೇಶಕರ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತರಾದ ದೊಡ್ಡಮಾದೇಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಟ್ಟನ ಕೊಪ್ಪಲು ವೀರೇಶ್ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಮಹದೇವಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ದೇವಿರಹಳ್ಳಿ ಶ್ವೇತಾ ನಾಮಪತ್ರ ಸಲ್ಲಿಸಿದ್ದು,

ತಲಾ 9 ಮತ ಪಡೆದು ದೊಡ್ಡಮಾದೇಗೌಡ ಅಧ್ಯಕ್ಷ, ವೀರೇಶ್ ಉಪಾಧ್ಯಕ್ಷರಾಗಿ ಚುನಾಯಿತರಾದರು. 6 ಮತ ಗಳಿಸಿದ ಕಾಂಗ್ರೆಸ್ ಬೆಂಬಲಿತ ಪ್ರತಿಸ್ಪರ್ಧಿ ಅಭ್ಯರ್ಥಿಗಳು ಪರಾಜಿತರಾದರು. ಚುನಾವಣಾಧಿಕಾರಿಯಾಗಿ ತಾಪ ಇಒ ಶ್ರೀ ನಿವಾಸ್ ಕಾರ್ಯನಿರ್ವಹಿಸಿದ್ದರು.

ವಿಜೇತರಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರವಿ ಕಂಸಾಗರ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಮಲ್ಲಪ್ಪ, ನಿರ್ದೇಶಕರಾದ ಮಾಯಣ್ಣ, ಹನುಮಂತು, ತಮ್ಮಡಹಳ್ಳಿ ಈರಪ್ಪ, ಮುಖಂಡರಾದ ಚೊಟ್ಟನಹಳ್ಳಿ ಲೋಕೇಶ್(ಕೆಂಪಲಿಂಗು) ಹುಲ್ಲಳ್ಳಿ ಮನು, ಶಿವಕುಮಾರ, ಕೆಂಚೇಗೌಡ ಸೇರಿದಂತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net