ದೊಡ್ಡಲಾಲಸಾಬವಲಿ ಅಜ್ಜನ ತುಲಾಭಾರ

12 HLR 1
Published on

ಹೊಳೆಆಲೂರ: ಜನಸಾಮಾನ್ಯರು ಧರ್ಮ, ದೇವರು, ಸಾಧು ಸಂತರ ಬಗೆಗೆ ಅಚಲವಾದ ಶ್ರದ್ಧೆ ಭಕ್ತಿ ಇಟ್ಟುಕೊಂಡಿರುತ್ತಾರೆ. ಅವರ ನಂಬಿಕೆ, ಆಶಯಕ್ಕೆ ಧಕ್ಕೆ ಬಾರದಂತೆ ಧಾರ್ಮಿಕ ಹಾಗೂ ಸಮಾಜಮುಖಿ ಚಿಂತನೆ ಮೈಗೊಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯದ ವಾತಾವರಣ ನೆಲೆ ಮೂಡುವಂತೆ ಮಾಡಬೇಕು ಎಂದು ಯಚ್ಚರೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಗಾಡಗೋಳಿ ಗ್ರಾಮದಲ್ಲಿ ಭಾನುವಾರ ಹೆಬ್ಬಳ್ಳಿ ಗ್ರಾಮದ ದೊಡ್ಡಲಾಲಸಾಬವಲಿ ಅಜ್ಜನವರ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಹತ್ತಾರು ಅವಿಷ್ಕಾರಗಳು ಆಗಿದ್ದರೂ ಜನರಲ್ಲಿನ ಮೂಢನಂಬಿಕೆ ಸಂಪೂರ್ಣ ಮಾಯವಾಗಿಲ್ಲ. ಅವರ ಮುಗ್ಧತೆಯನ್ನು ಕೆಲವರು ದುರಪಯೋಗ ಪಡಿಸಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ಅಂಥವರಿಗೆ ಜಾಗ್ರತೆ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಸ್.ವೈ. ಗಾಣಿಗೇರ ಮಾತನಾಡಿ, ವೈವಿಧ್ಯದಲ್ಲಿ ಏಕತೆ ನಮ್ಮ ಸಂಪ್ರದಾಯವಾಗಿದೆ. ಪ್ರತಿಯೊಬ್ಬರ ಆಚಾರ- ವಿಚಾರ ಭಿನ್ನವಿಭಿನ್ನವಾಗಿದ್ದರೂ ಗುರಿ ಮಾತ್ರ ಮಾನವ ಕಲ್ಯಾಣವೇ ಆಗಿದೆ. ಗ್ರಾಮೀಣ ಭಾಗದಲ್ಲಿ ನೆರೆಹೊರೆಯವರು ಪರಸ್ಪರ ಸೌಹಾರ್ದದಿಂದ ಬಾಳುವುದನ್ನು ಮರೆಯಬಾರದು ಎಂದು ಹೇಳಿದರು. ಎಸ್.ಎಚ್. ಮುಲ್ಕಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಶರಣಪ್ಪ ಜಂಗಣ್ಣವರ, ಆರ್.ಎನ್.ಪಾಟೀಲ, ಶೇಖರಗೌಡ ಹುಡೇದಮನಿ, ನಿಂಗನಗೌಡ ಹಿರೇಗೌಡ್ರ, ವೀರಣ್ಣ ತಳವಾರ, ಕುಮಾರ ಗಣಿ, ಯಲ್ಲಪ್ಪ ಸಿದ್ದನಗೌಡ ಬೊಮ್ಮನಗೌಡ್ರ, ಹನುಮಪ್ಪ ತಳವಾರ, ಟಿಪ್ಪುಸುಲ್ತಾನ ನದಾಫ ಇತರರಿದ್ದರು. ಖಾಸಿಂಸಾಬ್ ಗಾಡಗೋಳಿ ಸಹೋದರರು ತುಲಾಭಾರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net