ಆಲಗೌಡನಹಳ್ಳಿಯಲ್ಲಿ ದೊಡ್ಡಕೆರೆ ನಾಮಫಲಕ ಅನಾವರಣ

IMG-20240914-WA0144
Published on

ಹೊಳೆನರಸೀಪುರ: ತಾಲೂಕಿನ ಆಲಗೌಡನಹಳ್ಳಿ ಗ್ರಾಮದಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಿರುವ ದೊಡ್ಡ ಕೆರೆ ನಾಮಫಲಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತಾಯ ಅನಾವರಣ ಮಾಡಿದರು.


ಆಲಗೌಡನಹಳ್ಳಿ ಕೆರೆಯ 7 ಎಕರೆ ಹೂಳು ತೆಗೆಯಲು 7.47 ಲಕ್ಷ ರೂ.ಖರ್ಚಾಗಿದೆ ಎಂದು ಮಾಹಿತಿ ಅವರು ನೀಡಿದರು.


ದೊಡ್ಡಕಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಪಿಡಿಒ ಶಿವಣ್ಣ, ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ಕೃಷಿ ಮೇಲ್ವಿಚಾರಕ ವಸಂತ್, ಮೇಲ್ವಿಚಾರಕ ನಾರಾಯಣ್, ಪುಟ್ಟಸೋಮಪ್ಪ, ಜಗನ್ನಾಥ್, ಇಂಜಿನಿಯರ್ ಪುಷ್ಪರಾಜ್, ಸೇವಾಪ್ರತಿನಿಧಿ ಸರ್ವಮಂಗಳಾ, ಲತಾ ಸವಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net