ಉತ್ತಮ ಆರೋಗ್ಯಕ್ಕಾಗಿ ನಡಿಗೆ ಅವಶ್ಯ

doddaballapura walkthan
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ.
ಪ್ರತಿನಿತ್ಯ ನಿಯಮಿತವಾಗಿ ನಡೆಯುವುದು ಆರೋಗ್ಯಕರ ಅಭ್ಯಾಸವಾಗಿದೆ. ಅಂತೆಯೇ ರಾತ್ರಿಯ ನಡಿಗೆಗಳು ಬೆಳಗ್ಗೆಯ ನಡಿಗೆಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದಲ್ಲಿ ಆರ್ಯವೈಶ್ಯ ಯುವಜನ ಸಂಘ ಹಾಗೂ ಮಹಿಳಾ ಮಂಡಳಿಯಿಂದ ಹಮ್ಮಿಕೊಂಡಿದ್ದ 4ನೇ ವಾಕಾಥಾನ್‌ನಲ್ಲಿ ಮಾತನಾಡಿದರು. ರಾತ್ರಿಯ ಊಟದ ನಂತರ 15 ನಿಮಿಷಗಳ ನಡಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸುತ್ತದೆ. ಮೊಬೈಲ್ ಗೀಳಿನಿಂದ ಮಕ್ಕಳು ನಡಿಗೆ, ಕ್ರೀಡಾ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಹೀಗಾಗಿ ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ನಡಿಗೆಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದು ಹೇಳಿದರು.
ವೃದ್ಧರು, ಯುವಕರು ಭಾಗಿ: ಬೆಳ್ಳಂ ಬೆಳಗ್ಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ನಾಲ್ಕು ಕಿಲೋ ಮೀಟರ್ ವರೆಗೆ ಕಾಲ್ನಡಿಗೆಯಲ್ಲಿ ಸಾಗಿದರು. ನಡಿಗೆಗಾಗಿ ಆರೋಗ್ಯ ಆರೋಗ್ಯಕ್ಕಾಗಿ ನಡಿಗೆ ಘೋಷವಾಕ್ಯದೊಂದಿಗೆ ನಗರದ ವಾಸವಿ ಕಲ್ಯಾಣ ಮಂಟಪದಿಂದ ಅರಂಭಗೊಂಡ ಜಾಥಾ ಕೋರ್ಟ್ ರಸ್ತೆ, ಬಸವ ಭವನ, ತಾಲೂಕು ಕಚೇರಿ ರಸ್ತೆ ಮಾರ್ಗವಾಗಿ ಸಾಗಿ ವಾಸವಿ ಕಲ್ಯಾಣ ಮಂಟಪದ ಬಳಿ ಸಮಾವೇಶಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net