

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನಲ್ಲಿ ಬೈಕ್‌ಗಳನ್ನು ಕದ್ದು, ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿ ಸಮೀಪದ ಅಮೃತಹಳ್ಳಿ ನಿವಾಸಿ ಚೇತನ್ (19), ಅಮೃತಹಳ್ಳಿ ಹೂಡಿ ಲೇಔಟ್ ನಿವಾಸಿ ಸಾಯಿ ಪವನ್ (18) ಬಂಧಿತರು. ಆರೋಪಿಗಳಿಂದ 13 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ನಂಬರ್ ಪ್ಲೆಟ್ ಇಲ್ಲದ ಬೈಕ್ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆ ಸಿಬ್ಬಂದಿ ವೆಂಕಟೇಶ್ ಕುಮಾರ್ ಮತ್ತು ಅರ್ಜುನ್ ಲಮಾಣಿ ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ಬೆಂಗಳೂರು, ದೇವನಹಳ್ಳಿ, ಯಲಹಂಕ, ಕೊತನೂರು, ದೊಡ್ಡಬಳ್ಳಾಪುರ ನಗರ, ಕಾರಹಳ್ಳಿ, ಹೆಗ್ಗಡೆನಗರ ಮತ್ತಿತರ ಕಡೆ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಸುಮಾರು 12.50 ಲಕ್ಷ ಸಾವಿರ ರೂ. ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ಡಿವೈಎಸ್ಪಿ ರವಿ ಅವರ ಮಾರ್ಗದರ್ಶನಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಡಿ.ಎಚ್.ಮುನಿಕೃಷ್ಣ ನೇತೃತ್ವದಲ್ಲಿ ಪಿಎಸ್‌ಐ ಪಂಕಜಾ, ಸಿಬ್ಬಂದಿ ವೆಂಕಟೇಶ್ ಕುಮಾರ್, ಅರ್ಜುನ್ ಲಮಾಣಿ, ಮಂಜುನಾಥ್, ಹನುಂತರ ರಾಜು,ಗಂಗಯ್ಯ, ಸಚಿನ ಉಪ್ಪಾರ ತಂಡ ದ್ವಿಚಕ್ರ ವಾಹನ ವಶ ಪಡಿಸಿಕೊಂಡಿದೆ.