ಅಕ್ರಮ ಕಟ್ಟಡಗಳ ನಿರ್ಮಾಣ ತಡೆಗೆ ದೊಡ್ಡಬಳ್ಳಾಪುರ ನಗರಸಭೆ ಕ್ರಮ

22 05 2025_BNG_RURAL_PAGE_3
ದೊಡ್ಡಬಳ್ಳಾಪುರ ನಗರಸಭೆ ಅಧ್ಯೆ ಕೆ.ಸುಮಿತ್ರಾ ಆನಂದ್​ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ನಗರಸಭೆ ಉಪಾಧ್ಯಕ್ಷ ಎಂ.ಮಲ್ಲೇಶ್​,ಪೌರಾಯುಕ್ತ ಕಾರ್ತಿಕೇಶ್ವರ್​, ಸ್ಥಾಯಿ ಸಮಿತಿ ಅಧ್ಯಕ್ಷವಿ.ಎಸ್​.ರವಿಕುಮಾರ್​, ಸದಸ್ಯರು ಇದ್ದರು.
Published on

ದೊಡ್ಡಬಳ್ಳಾಪುರ : ನಗರ ಸ್ಥಳಿಯ ಸಂಸ್ಥೆಗಳಿಂದ ಮಂಜೂರು ಮಾಡಲಾದ ಕಟ್ಟಡ ಪರವಾನಗಿ ಉಲ್ಲಂಸಿ ನಿರ್ಮಿಸುವ ಕಟ್ಟಡಗಳು, ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸವೋರ್ಚ್ಛ ನ್ಯಾಯಾಲಯ ನೀಡಿರುವ ಅದೇಶವು ನಗರಸಭೆಗೆ ಮರಣ ಶಾಸನದಂತಿದೆ, ಈ ಆದೇಶ ಜಾರಿಯಾದರೆ ಕಟ್ಟಡಗಳನ್ನು ನಿರ್ದಾಣ್ಯವಾಗಿ ಕೆಡವಬೇಕಾಗುತ್ತದೆ.

ಯೋಜನಾ ಪ್ರಾಧಿಕಾರದ ತಾಂತ್ರಿಕ ಸಮಸ್ಯೆಗಳು ಹಾಗೂ ನಗರಸಭೆಯಿಂದ ಪರವಾನಗಿ ನೀಡಲು ಇರುವ ನಿಯಮಗಳ ಬಗ್ಗೆ ಮಾರ್ಪಾಡು ಮಾಡಲು ಸ್ಥಳಿಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಆಡಳಿತ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದರು.

ಅಧ್ಯೆ ಕೆ.ಸುಮಿತ್ರಾ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಾತೀತವಾಗಿ ಎಲ್ಲ ಸದಸ್ಯರು ಈ ಬಗ್ಗೆ ಚರ್ಚೆ ನಡೆಸಿದರು. ಸಭೆಗೆ ಮಾಹಿತಿ ನೀಡಿದ ನಗರಸಭೆ ಎಇಇ ರಾಮೇಗೌಡ, ಸ್ಥಳಿಯ ಸಂಸ್ಥೆಗಳಿಂದ ಮಂಜೂರು ಮಾಡಲಾದ ಕಟ್ಟಡ ಪರವಾನಗಿ ಉಲ್ಲಂಸಿ ನಿರ್ಮಿಸುವ ಕಟ್ಟಡಗಳು ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸವೋರ್ಚ್ಛನ್ಯಾಯಾಲಯ 2024ರ ಡಿ.17ರಂದು ಆದೇಶ ಹೊರಡಿಸಿದೆ. ಈ ಆದೇಶದಂತೆ ಕಟ್ಟಡ ನಿರ್ಮಾಣ ಮಾಡುವಾಗ ನಗರಸಭೆಗೆ ನೆ ಮಂಜೂರಾತಿ ನೀಡಬೇಕು ಎಂದು ಹೇಳಿದರು.

ಅವರ ಮಂಜೂರಾತಿ ನಕಾಶೆಯಂತೆ ಕಟ್ಟಡ ನಿರ್ಮಾಣ ಮಾಡಿದ್ದರೆ ಮಾತ್ರ ಪರಿಶೀಲನೆ ನಡೆಸಿ, ಮುಕ್ತಾಯ, ವಾಸಯೋಗ್ಯ ಪ್ರಮಾಣ ಪತ್ರಗಳನ್ನು ನೀಡಬೇಕಿದೆ. ಆ ನಂತರವಷ್ಟೇ ಅಗತ್ಯ ಸೇವೆಗಳಾದ ವಿದ್ಯುತ್​, ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ನೀಡಲು ಕ್ರಮ ವಹಿಸಬೇಕಿದೆ. ವಾಣಿಜ್ಯ ಕಟ್ಟಡ ಅನಧಿಕೃತವಾಗಿದ್ದರೆ ವ್ಯಾಪಾರಕ್ಕೆ ಅನುಮತಿ ತರಬೇಕಿದ್ದು, ಈ ಬಗ್ಗೆ ನಿಯೋಗ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ವಿವರಿಸಿದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಎಚ್​.ಎಸ್​.ಶಿವಶಂಕರ್​, ನಮ್ಮಲ್ಲಿಯ ತಾಂತ್ರಿಕ ತೊಂದರೆಗಳಿಂದ ಪರವಾನಗಿ ನೀಡದಿದ್ದರೆ ಖಾತೆ ಹೊಂದಿರುವವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಲಿದ್ದಾರೆ. ಇದನ್ನು ತಡೆಯುವುದು ಕಷ್ಟಸಾಧ್ಯವಾಗಲಿದೆ ಎಂದರು.

ನಗರಸಭೆ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ : ಇತ್ತೀಚೆಗೆ ಕೆಲ ಸಂಟನೆಗಳು ನಗರಸಭೆ ಕಾರ್ಯವೈಖರಿ, ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ ನಡೆಸಿ ದೂರುಗಳನ್ನು ನೀಡಿವೆ. ಅಧಿಕಾರಿಗಳು ಮಾಡುವ ಕೆಲಸಕ್ಕೆ ಎಲ್ಲರೂ ಹೊಣೆಯಾಗುತ್ತಾರೆ. ಯಾವುದೇ ಕೆಲಸ ವಿಳಂಬವಾಗದಂತೆ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಸದಸ್ಯ ಟಿ.ಎನ್​.ಪ್ರಭುದೇವ್​ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಕಾರ್ತಿಕೇಶ್ವರ್​, ನಗರಸಭೆಯಲ್ಲಿ ಮೂರು ತಿಂಗಳಲ್ಲಿ 4,865 ಅರ್ಜಿಗಳು ಬಂದಿದ್ದು, 3,675 ಅರ್ಜಿಗಳು ವಿಲೇವಾರಿಯಾಗಿವೆ. ಸಂಟನೆಗಳ ಮುಖಂಡರ ಆರೋಪ ವೈಯಕ್ತಿಕವಾಗಿದ್ದು, ಇದರಲ್ಲಿ ಯಾವುದೇ ಹುರಳಿಲ್ಲ, ಏಪ್ರಿಲ್​ ತಿಂಗಳಲ್ಲಿ ತೆರಿಗೆ ಸಂಗ್ರಹ 4 ಕೋಟಿ ರೂ. ಆಗಿದೆ. ಸಣ್ಣ ಲೋಪಗಳನ್ನು ಹೊರತುಪಡಿಸಿದರೆ ಯಾವುದೇ ರ್ನಿಲಕ್ಷ$್ಯ ವಹಿಸುತ್ತಿಲ್ಲಎಂದು ವಿವರಿಸಿದರು.

ಮೂಲ ಸೌಕರ್ಯ ಕೊರತೆ : ನಗರಸಭೆಗೆ ನಗರೋತ್ಥಾನ ಅನುದಾನ ಬಂದಿದ್ದರೂ, ರಸ್ತೆ ಹಾಗೂ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಅನುದಾನ ಬಿಡುಗಡೆ ಹಾಗೂ ರ್ನಿಲಕ್ಷ್ಯ ವಹಿಸುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಕ್ರಮ ವಹಿಸುತ್ತಿಲ್ಲ ಎಂದು ಸದಸ್ಯ ಎಂ.ಜಿ.ಶ್ರೀನಿವಾಸ್​ ದೂರಿದರು. ನಗರೋತ್ಥಾನದ ಕೆಲಸಗಳು ಎಷ್ಟಾಗಿವೆ ಎನ್ನುವುದರ ಬಗ್ಗೆ ಮಾಹಿತಿ ನೀಡಿ ಎಂದರು. ಈಗಿರುವ ಗುತ್ತಿಗೆದರರು ಕಾಮಗಾರಿಗಳನ್ನು ವಿಳಂಬ ಮಾಡುತ್ತಿರುವ ಬಗ್ಗೆ ನೋಟಿಸ್​ಗಳನ್ನು ನೀಡಲಾಗಿದೆ. ಈಗ ಬೇರೆ ಟೆಂಡರ್​ ಕರೆದರೆ ಹೆಚ್ಚಿನ ಯೋಜನಾ ವೆಚ್ಚವಾಗಲಿದೆ. ಈ ದಿಸೆಯಲ್ಲಿ ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಲಾಗುತ್ತಿದ್ದು, ಕಾಮಗಾರಿ ಮುಂದುವರಿಸುವ ಬಗ್ಗೆ ಗುತ್ತಿಗೆದಾರರು ಲಿಖಿತವಾಗಿ ಸಮಜಾಯಿಷಿ ನೀಡಿದ್ದಾರೆ ಎಂದು ಎಇಇ ರಾಮೇಗೌಡ ತಿಳಿಸಿದರು.

ಪ್ರತಿಮೆ ಸ್ಥಾಪನೆಗೆ ವಿಳಂಬ ಸಲ್ಲ : ಲೋಕಸೇವಾನಿರತ ಕೊಂಗಾಡಿಯಪ್ಪನವರ ಪ್ರತಿಮೆ ಸ್ಥಾಪನೆಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಸದಸ್ಯ ಶಿವ ಹೇಳಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಕ್ರಮ ವಹಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಸ್​.ರವಿಕುಮಾರ್​ ತಿಳಿಸಿದರು. ನಗರದಲ್ಲಿ ಮಳೆಯಿಂದಾಗಿ ಚರಂಡಿ ಅವ್ಯವಸ್ಥೆಗಳಾಗಿದ್ದು, ನಗರ ನೈರ್ಮಲ್ಯದ ಬಗ್ಗೆ ಕ್ರಮ ವಹಿಸುವಂತೆ ಸದಸ್ಯ ಆನಂದ್​ ಒತ್ತಾಯಿಸಿದರು. ಪೌರಾಯುಕ್ತ ಕಾರ್ತಿಕೇಶ್ವರ್​ ಮಾತನಾಡಿ, ನಗರಸಭೆಯಲ್ಲಿ ಪರವಾನಗಿ ನೀಡಲು ಸರ್ಕಾರದ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತದೆ. ಸದಸ್ಯರ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net