ಉತ್ತಮ ರಸ್ತೆಗಳಿಂದ ಅಭಿವೃದ್ಧಿ ಸಾಧ್ಯ

doddaballapura road work
Published on

ದೊಡ್ಡಬಳ್ಳಾಪುರ: ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ರಾಜಘಟ್ಟ ಗ್ರಾಮದ ಕೆರೆ ಏರಿ ರಸ್ತೆ ವಿಸ್ತರಣೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
2.60 ಕೋಟಿ ರೂ.ವೆಚ್ಚದಲ್ಲಿ ರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸ್ಥಳೀಯರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈಗಿರುವ ಮಾನದಂಡದ ಪ್ರಕಾರ ಪ್ರತಿ ಕಿಮೀ ಕಾಮಗಾರಿಗೆ ಗೊತ್ತುಪಡಿಸಿರುವ ದರ ಮುಂದಿನ 5 ವರ್ಷಗಳವರೆಗೂ ರಸ್ತೆಯ ನಿರ್ವಹಣೆ ಕಾಮಗಾರಿ ಮಾಡಿಸುವ ಜವಾಬ್ದಾರಿ ಗುತ್ತಿಗೆದಾರದ್ದಾಗಿರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net