ದೊಡವಾಡ ಚೆಕ್ ಪೋಸ್ಟ್‌ನಲ್ಲಿ ಬಿಗಿ ಕ್ರಮ

8dwd1-Web
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್‌ನಲ್ಲಿ ವೈದ್ಯಕೀಯ ತಪಾಸಣೆ ನಡೆಸುತ್ತಿರುವ ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿ.
Published on

ದೊಡವಾಡ: ಗ್ರಾಮದಲ್ಲಿ ಹಾದು ಹೋಗಿರುವ ಧಾರವಾಡ- ಬೈಲಹೊಂಗಲ ಜಿಲ್ಲಾ ಮುಖ್ಯ ರಸ್ತೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್‌ನಲ್ಲಿ ಧಾರವಾಡದಿಂದ ಬರುವ ಯಾವುದೇ ವಾಹನ ಮತ್ತು ನಾಗರಿಕರನ್ನು ಸರ್ಕಾರದ ಆದೇಶದ ಅನುಸಾರ ಬೆಳಗಾವಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಬುಧವಾರ ವಾಪಸ್ ಕಳುಹಿಸಲಾಯಿತು.

ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಗಂಭೀರ ಸನ್ನಿವೇಶದಲ್ಲಿ ತಮ್ಮ ಪರಿವಾರದಿಂದ ದೂರ ಉಳಿದು ಜನರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು ಮತ್ತು ಆರೋಗ್ಯ ಇಲಾಖೆ, ಗ್ರಾಪಂ ಸಿಬ್ಬಂದಿ ಕಾರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಕೆಲವು ಜನರು ಸರ್ಕಾರ ನೀಡಿರುವ ತಾಯಿ ಕಾರ್ಡ್‌ನ್ನು ತೋರಿಸಿ ಅನವಶ್ಯಕವಾಗಿ ಓಡಾಡುತ್ತಿದ್ದಾರೆ. ಅಂಥವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮರಳಿ ಕಳುಹಿಸಲಾಯಿತು. ಹೆಚ್ಚು ವಾಹನ ದಟ್ಟಣೆ ಉಂಟಾಗುವ ರಸ್ತೆ ಇದಾಗಿದ್ದು, ದೊಡವಾಡದ ಚೆಕ್ ಪೋಸ್ಟ್ ನಿಂದ ಅನಗತ್ಯವಾಗಿ ಸಂಚರಿಸುವ ಜನರನ್ನು ನಿಯಂತ್ರಿಸಲು ಸಹಾಯಕವಾಗಿದೆ. ದೊಡವಾಡ ಠಾಣೆ ಪೊಲೀಸ್ ಸಿಬ್ಬಂದಿ ಪಾಳಿಯ ಮೇಲೆ ನಿಯೋಜಿಸಲಾಗಿದೆ. ಸಿಬ್ಬಂದಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಗ್ರಾಮದ ನಿವಾಸಿಗಳು ಗ್ರಾಪಂನವರು, ಅಂಗನವಾಡಿ ಕಾರ್ಯಕರ್ತೆಯರು ಬೆಳಗ್ಗೆ ಉಪಾಹಾರ ಮಧ್ಯಾಹ್ನ ಊಟ, ಮಜ್ಜಿಗೆ, ಅಂಬಲಿ, ಹಾಲು, ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net