ದೊಡ್ಡಮ್ಮ ಗ್ರಾಮದೇವತೆ ಕುಂಭಾಭಿಷೇಕ

doddamma
Published on

ಕುಶಾಲನಗರ: ಇಲ್ಲಿಗೆ ಸಮೀಪದ ಮುಳ್ಳುಸೋಗೆಯಲ್ಲಿರುವ ಮೂರು ಗ್ರಾಮಗಳ ಗ್ರಾಮದೇವತೆ ದೊಡ್ಡಮ್ಮ ದೇವತಾ ಪ್ರತಿಷ್ಠಾಪನೆಯ ೧೨ನೇ ವರ್ಷದ ಅಂಗವಾಗಿ ಕುಂಭಾಭಿಷೇಕ ಹಾಗೂ ವಿವಿಧ ಧಾರ್ಮಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮುಳ್ಳುಸೋಗೆ, ಗುಮ್ಮನಕೊಲ್ಲಿ ಹಾಗೂ ಜನತಾ ಕಾಲನಿ ಈ ಮೂರು ಗ್ರಾಮಗಳ ವ್ಯಾಪ್ತಿಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತರಾದರು. ಎರಡು ದಿನಗಳ ಕಾಲ ನಡೆದ ದೇವತಾ ಪೂಜೋತ್ಸವದಲ್ಲಿ ಬುಧವಾರ ಬೆಳಗ್ಗೆ ೮ ಗಂಟೆಗೆ ಗಣಪತಿ ಹೋಮ, ನವಗ್ರಹ ಹೋಮ, ಕಳಸಾಭಿಷೇಕ, ಮಹಾಪೂಜೆ, ಸಂಜೆ ೭ ಗಂಟೆಗೆ ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಗ್ಬಲಿ ನೆರವೇರಿತು.

ಗುರುವಾರ ಬೆಳಗ್ಗೆ ಕಾವೇರಿ ನದಿಯಿಂದ ಕಳಶ ತರಲಾಯಿತು. ಬಳಿಕ ಗಣಪತಿ ಹೋಮ, ದುರ್ಗಾ ಹೋಮ, ಪ್ರತಿಷ್ಠಾ ಕಳಸಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಿತು. ದೈವಜ್ಞ ಜಗದೀಶ್ ಉಡುಪ, ಸುಂಟಿಕೊಪ್ಪದ ಗಣೇಶ ಭಟ್, ಕೌಶಿಕ್ ಅವರಿಂದ ವಿವಿಧ ಹೋಮ ಹವನಾದಿಗಳು ನಡೆದವು.

ದೇವಾಲಯ ಸಮಿತಿ ಅಧ್ಯಕ್ಷ ಎಂ.ಎ.ಕುಮಾರಸ್ವಾಮಿ, ಉಪಾಧ್ಯಕ್ಷ ಧನರಾಜ್, ಕಾರ್ಯದರ್ಶಿ ಎಂ.ಹೆಚ್.ಅಣ್ಣೇಗೌಡ, ಸಹಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಸೋಮು, ನಿರ್ದೇಶಕರಾದ ಎಂ.ಕೆ.ಗಣೇಶ್, ಎಂ.ಆರ್.ನಂಜುಂಡ, ಗೋವಿಂದರಾಜು, ಡಿ.ಅಪ್ಪಣ್ಣ, ಎಂ.ಸಿ.ಮಂಜುನಾಥ್, ಪುಟ್ಟರಾಜು, ಜಯರಾಜ್, ವಿಶ್ವನಾಥ್, ಗಣಪತಿ, ಸೋಮು, ಎಂ.ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net