ದೊಡಗೌಡರ ಬೆಂಬಲಿತ ಪೆನಲ್‌ಗೆ ಜಯ

26BLH4
Published on

ಬೈಲಹೊಂಗಲ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ಗೆ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮಾಜಿ ಶಾಸಕ ಮಹಾಂತೇಶ ದೊಡಗೌಡರ ಬೆಂಬಲಿತ ಪೆನಲ್ ಜಯ ಸಾಧಿಸಿದೆ.

11 ಅಭ್ಯರ್ಥಿಗಳು ಸದಸ್ಯ ಸಹಕಾರ ಸಂಘದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾಂತೇಶ ದೊಡಗೌಡರ (ಮದನಭಾಂವಿ), ಬಾಳಾಸಾಹೇಬ ದೇಸಾಯಿ (ವಣ್ಣೂರ), ಆನಂದ ಜಕಾತಿ (ತಿಗಡಿ), ಕುಮಾರ ಪಾಟೀಲ (ಬೈಲಹೊಂಗಲ), ಗುರಪ್ಪ ಮೆಟಗುಡ್ಡ (ಬೈಲಹೊಂಗಲ), ಈಶ್ವರ ಶಿವಪ್ಪ ಮಾರಿಹಾಳ/ಉಳ್ಳೇಗಡ್ಡಿ (ದೇವಲಾಪುರ), ನಿಂಗಪ್ಪ ಚವಡನ್ನವರ (ದೊಡವಾಡ), ಸುಬುದ್ದಿಸ್ವಾಮಿ ರುದ್ರಾಪೂರ (ದೇವಲಾಪುರ), ಕೀರಪ್ಪ ನಂಜರಗಿ (ಮದನಭಾಂವಿ), ಉಮಾ ಏಣಗಿ (ಒಕ್ಕುಂದ), ಸುಷ್ಮಾ ಪಾಟೀಲ (ಅನಿಗೋಳ) ಆಯ್ಕೆಯಾದರು.

ಸಂಜೀವಗೌಡ ಪಾಟೀಲ (ಬೈಲಹೊಂಗಲ), ಅಜ್ಜಪ್ಪ ಕುರಬರ ಉರ್ಪ ದೊಡ್ಡ ಕುರಬರ (ಬಾಗೇವಾಡಿ), ಧೂಳಪ್ಪ ಇಟಗಿ (ಮೂಗ ಬಸವ) ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ. ಆಯ್ಕೆಯಾದ ಸದಸ್ಯರು, ಬೆಂಬಲಿಗರು ಗುಲಾಲ ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net