

ತರೀಕೆರೆ: ಎಂ.ಸಿ.ಹಳ್ಳಿ ಗ್ರಾಪಂನಲ್ಲಿ ಜೀವನ ನಿರ್ವಹಣೆಗೆ ಬೇರೆಡೆ ತೆರಳಿದ ಕುಟುಂಬದ ಜಾಗವನ್ನು ಬೇರೆಯವರು ಒತ್ತುವರಿ ಮಾಡಿ ಖಾತೆ ಮಾಡಿಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಛಲವಾದಿ ಸಮಾಜದ ತಾಲೂಕು ಅಧ್ಯಕ್ಷ ಎಸ್.ಕೆ.ಸ್ವಾಮಿ ಮನವಿ ಮಾಡಿದರು.
ಬುಧವಾರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಎಸಿ ರೇಣುಕಾಪ್ರಸಾದ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ.ಜಾತಿ, ಪ.ವರ್ಗಗಳ ಉಪ ವಿಭಾಗೀಯ ಮಟ್ಟದ ದೌರ್ಜನ್ಯ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು.
ಬೇರೆಡೆ ತೆರಳಿದ್ದ ಕುಟುಂಬ ಸದಸ್ಯರು ಆಗಾಗ ಗ್ರಾಮಕ್ಕೆ ಬಂದು ಮನೆಯಲ್ಲಿ ವಾಸವಿದ್ದು ಹೋಗುತ್ತಿದ್ದರು. ಈ ನಡುವೆ ಜಾಗವನ್ನು ಬೇರೊಬ್ಬರು ಅತಿಕ್ರಮಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅಕ್ರಮವಾಗಿ ಖಾತೆ ಮಾಡಿರುವ ಜಾಗ ಪಂಚಾಯತ್ ರಾಜ್ ಅಧಿನಿಯಮ ಕಲಂ 269ರಡಿ ಮೇಲ್ಮನವಿದಾರರ ಹೆಸರಿಗೆ ಬದಲಾಯಿಸಿ ಕೊಡಬೇಕೆಂದು 2017ರಲ್ಲಿ ತಾಪಂ ಇಒ ಕೂಡ ಗ್ರಾಪಂ ಆಡಳಿತಕ್ಕೆ ಆದೇಶಿಸಿದ್ದರು. ಆದರೆ ಗ್ರಾಪಂ ಆಡಳಿತ ಖಾತೆ ಬದಲಾಯಿಸಿಕೊಡಲು ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಎಸಿ ರೇಣುಕಾಪ್ರಸಾದ್ ಮಾತನಾಡಿ, ವಿವಾದಿತ ಜಾಗದ ಸದ್ಯದ ಪರಿಸ್ಥಿತಿ ಅವಲೋಕಿಸಿ ಸಂತ್ರಸ್ತರಿಗೆ ನ್ಯಾಯಕೊಡಿಸಿಕೊಡಿಸುವುದಾಗಿ ಭರವಸೆ ನೀಡಿದರು.
ಡಿಎಸ್ಎಸ್ ವಿಭಾಗೀಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ಪಟ್ಟಣದ ದಳವಾಯಿಕೆರೆ ಅಂಗಳ ಒತ್ತುವರಿಯಾಗಿದ್ದು, ಬಲಾಢ್ಯರು ಮನೆ ನಿರ್ವಿುಸಿಕೊಂಡಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸಿ ಐತಿಹಾಸಿಕ ಕೆರೆ ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ರೇಣುಕಾಪ್ರಸಾದ್ ಮಾತನಾಡಿ, ಮೊದಲು ಒತ್ತುವರಿ ಜಾಗ ಗುರುತಿಸಿ ಪರಿಶೀಲನೆ ಮಾಡಲಾಗುವುದು. ಕೆರೆ ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪರಶಿವಮೂರ್ತಿ ಕಳೆದ ಸಭೆಯ ಅನುಪಾಲನಾ ವರದಿ ಓದಿದರು.
ದಲಿತ ಕುಟುಂಬಗಳಿಗೆ ಹಂಚಬೇಕು ನಿವೇಶನ:
ಗೌರಾಪುರ ಗ್ರಾಪಂ ಹೆಬ್ಬೂರಿನಲ್ಲಿ 50 ದಲಿತ ಕುಟುಂಬಗಳು 11 ಗಂಟೆ ಜಾಗದಲ್ಲಿ ಮನೆ ನಿರ್ವಿುಸಿಕೊಂಡು ವಾಸಿಸುತ್ತಿವೆ. ರಾತ್ರಿಯಾದರೆ ಮಕ್ಕಳನ್ನು ಮನೆಯಲ್ಲಿ ಮಲಗಿಸಿ ಪಾಲಕರು ಬೀದಿಯಲ್ಲಿ ಮಲಗಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅನೇಕ ಬಾರಿ ಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪಕ್ಕದ ಹಾಳೂರು ಗ್ರಾಮಠಾಣಾದಲ್ಲಿ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೆ.ನಾಗರಾಜ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿ ರೇಣುಕಾಪ್ರಸಾದ್, ಸ್ಥಳ ಪರಿಶೀಲಿಸಲಾಗಿದೆ. ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇತರರಿದ್ದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಮಹಾಂತೇಶ್, ಸಿಡಿಪಿಒ ಕೆ.ಎಸ್.ಜ್ಯೋತಿಲಕ್ಷಿ್ಮೕ
ಡಿವೈಎಸ್ಪಿ ಏಗನಗೌಡ, ತಹಸೀಲ್ದಾರ್ ಸಿ.ಜಿ.ಗೀತಾ, ತಾಪಂ ಇಒ ಎನ್.ನಾರಾಯಣಸ್ವಾಮಿ,