ಶಿಕ್ಷಕರ ನೇಮಕಾತಿ: ದಾಖಲೆ ಪರಿಶೀಲನೆಗೆ ಅಂತಿಮ ಅವಕಾಶ

Published on

ಹೊಸಪೇಟೆ: ೨೦೨೨-೨೩ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ(ಜಿಪಿಟಿಆರ್)ಗೆ ಸಂಬAಧಿಸಿದAತೆ ಮೂಲ ದಾಖಲೆಗಳ ಸ್ವೀಕಾರ ಹಾಗೂ ನೈಜತೆ ಪರಿಶೀಲನೆಗೆ ಅಂತಿಮ ಅವಕಾಶ ಕಲ್ಪಿಸಿದೆ.

ಜೂ.೧೨ ರಿಂದ ಜೂ.೧೬ ರ ವರೆಗೆ ನಡೆದ ಪಕ್ರಿಯೆಯಲ್ಲಿ ಇಂಗ್ಲಿಷ್(ಕಕ)- ೫, ಸಮಾಜ ಪಾಠ ಕನ್ನಡ(ಕಕ)-೨, ಇಂಗ್ಲಿಷ್-೨ ಹಾಗೂ ಜೀವಶಾಸ್ತç -೧ ಸೇರಿದಂತೆ ಒಟ್ಟು ೧೦ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಗೈರು ಹಾಜರಾಗಿದ್ದಾರೆ. ದಾಖಲಾತಿಗಳ ಪರಿಶೀಲನೆಗೆ ಗೈರು ಹಾಜರಾದವರು  ಜೂ.೩೦ ರ ಒಳಗೆ ಡಿಡಿಪಿಐ ಕಚೇರಿಗೆ ದಾಖಲೆಗಳನ್ನು ಸಲ್ಲಿಸಲು ಅಂತಿಮ ಅವಕಾಶವನ್ನು ಕಲ್ಪಿಸಲಾಗಿದೆ. ಆನಂತರ ಮೆರಿಟ್ ಕ್ರಮ ಸಂಖ್ಯೆಗಳನ್ನು ಪರಿಗಣಿಸಲು ಬೆಂಗಳೂರಿನ ಕೇಂದ್ರೀಕೃತ ದಾಖಲಾತಿ ಘಟಕಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net