90 ವರ್ಷದ ಹಿರಿಯ ಮಹಿಳೆಗೆ ಎಡಚಪ್ಪೆಯ ಮರುಜೋಡಣೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ

BLDE UNIVARCITY
ವಿಜಯಪುರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ.
Published on

ವಿಜಯಪುರ:ಬಹು ಆರೋಗ್ಯ ಸಮಸ್ಯೆ ಹೊಂದಿದ್ದ 90 ವರ್ಷದ ಹಿರಿಯ ಮಹಿಳೆಗೆ ಎಡಚಪ್ಪೆಯ ಮರುಜೋಡಣೆ ಮಾಡುವಲ್ಲಿ ನಗರದ ಬಿಎಲ್​ಡಿಇ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಸ್ಥಳಿಯ ಅರವಳಿಕೆ ಹಿರಿಯ ತ ಡಾ. ಾನೇಶ್ವರ ಪಂಡಿತ ಅವರ 90 ವರ್ಷದ ತಾಯಿ ಕಾಲು ಜಾರಿ ಬಿದ್ದು ಪರಿಣಾಮ ಎಡಚಪ್ಪೆ ಮುರಿದಿತ್ತು. ಆಗ ಡಾ. ಜ್ಞಾನೇಶ್ವರ ಪಂಡಿತ ಅವರು ತಮ್ಮ ತಾಯಿಯ ಅನಾರೋಗ್ಯದ ಕುರಿತು ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಆಥೋರ್ಪೆಡಿಕ್​ ವೈದ್ಯ ಡಾ. ಗಿರೀಶ ಖೋದ್ನಾಪುರ ಅವರಿಗೆ ಮಾಹಿತಿ ನೀಡಿದ್ದು, ಆ ತಕ್ಷಣಕ್ಕೆ ಸ್ಪಂದಿಸಿದ ವೈದ್ಯರು ರೋಗಿ ಮನೆಗೆ ತೆರಳಿ ತಪಾಸಣೆ ನಡೆಸಿದ್ದಾರೆ.

90 ವರ್ಷದ ರೋಗಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಪೇಸ್​ ಮೇಕರ್​(ಹೃದಯ ಬಡಿತ ಸಂಬಂಧಿ ಯಂತ್ರ) ಅಳವಡಿಸಿರುವುದು, ಬಿಪಿ ಹಾಗೂ ಶುಗರ್​ ಕೂಡ ಇರುವ ಕಾರಣ ಚಿಕಿತ್ಸೆ ಕ್ಲಿಷ್ಟಕರವಾಗಿರುವುದು ವೈದ್ಯರ ಗಮನಕ್ಕೆ ಬಂದಿದೆ. ಆಗ ಡಾ. ಗಿರೀಶ ಖೋದ್ನಾಪುರ ಅವರು ಶಸಚಿಕಿತ್ಸೆಯ ಅಗತ್ಯತೆ ಬಗ್ಗೆಯೂ ರೋಗಿಯ ಪುತ್ರನಿಗೆ ತಿಳಿಸುವ ಮೂಲಕ ಮರುದಿನವೇ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಿ, ವೈದ್ಯಕಿಯ ಅಧೀಕ ಡಾ. ರಾಜೇಶ ಹೊನ್ನುಟಗಿ ನೇತೃತ್ವದ ಮೆಡಿಸಿನ್​ ವಿಭಾಗದ ವೈದ್ಯರ ತಂಡ ರೋಗಿ ತಪಾಸಣೆ ನಡೆಸಿತು.

ಆಸ್ಪತ್ರೆಗೆ ದಾಖಲಾದ ನಂತರ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ನೇತೃತ್ವದ ಡಾ.ಬಸವರಾಜ ಪಾಟೀಲ, ಡಾ. ರೇಣುಕಾ ಬಿರಾದಾರ, ಡಾ. ವಿದ್ಯಾ ತಂಬಾಕೆ ಅವರನ್ನೊಳಗೊಂಡ ಅರವಳಿಕೆ ವೈದ್ಯರ ತಂಡ ರೋಗಿಗೆ ಅನಸ್ತೇಶಿಯಾ ನೀಡಿದೆ. ಬೆಂಗಳೂರಿನಿಂದ ಆಗಮಿಸಿದ್ದ ಪೇಸ್​ ಮೇಕರ್​ ತಂತ್ರರ ಸಹಕಾರದ ಜತೆಗೆ ಡಾ. ಗಿರೀಶ ಖೋದ್ನಾಪುರ ಅವರು ವೃದ್ಧೆಯ ಎಡಭಾಗದ ಎಲುಬಿನಲ್ಲಿ ಬೈಪೋಲಾರ್​ ಇಂಪ್ಲಾಂಟ್​ನ್ನು ಕೇವಲ 25 ನಿಮಿಷಗಳಲ್ಲಿ ನಿಖರವಾಗಿ ಅಳವಡಿಸಿ ಯಶಸ್ವಿಯಾಗಿ ಶಸಚಿಕಿತ್ಸೆ ನೆರವೇರಿಸಿದ್ದಾರೆ.

ಸ್ವತ@ ವೈದ್ಯರೂ ಆದ ಡಾ. ಜ್ಞಾನೇಶ್ವರ ಪಂಡಿತ ಅಪರೂಪದ ಶಸಚಿಕಿತ್ಸೆ ಯಶಸ್ವಿಯಾಗಿರುವುದು ಕಂಡು ಸಂತಸ ವ್ಯಕ್ತಪಡಿಸಿದ್ದು, ತಮ್ಮ ತಾಯಿಗೆ ಮರುಜನ್ಮ ನೀಡಲಾಗಿದೆ ಎಂದಿದ್ದಾರೆ. ಅಲ್ಲದೆ, ಆಥೋರ್ಪೆಡಿಕ್​ ವಿಭಾಗದ ಮುಖ್ಯಸ್ಥ ಡಾ. ಸಂತೋಷ ನಂದಿ, ಡಾ. ಶ್ರೀಪಾದ ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮತ್ತಿತರ ಸಿಬ್ಬಂದಿಗೆ ಕೃತತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net