ವೈದ್ಯರ ಮುಷ್ಕರ ಜಿಲ್ಲಾದ್ಯಂತ ಒಪಿಡಿ ಬಂದ್​

ವೈದ್ಯಕಿಯ ವಿದ್ಯಾರ್ಥಿನಿಯ ಹತ್ಯೆಯ ಖಂಡಿಸಿ ಶನಿವಾರ ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಿಂದ ವೈದ್ಯರು, ನರ್ಸ್​ಗಳು ಪ್ರತಿಭಟಿಸಿದರು. ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯದ ವೈದ್ಯಕಿಯ ನಿರ್ದೇಶಕ ಡಾ.ರಮಣ್​ ಎಂ ಹುಲಿನಾಯ್ಕರ್​, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​. ಪಾಟೀಲ್​, ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಹರೇಂದ್ರಕುಮಾರ್​ ಇದ್ದರು.
Shridevi Hospital Doctors Protest Photos 01
ವೈದ್ಯಕಿಯ ವಿದ್ಯಾರ್ಥಿನಿಯ ಹತ್ಯೆಯ ಖಂಡಿಸಿ ಶನಿವಾರ ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯಿಂದ ವೈದ್ಯರು, ನರ್ಸ್​ಗಳು ಪ್ರತಿಭಟಿಸಿದರು. ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯದ ವೈದ್ಯಕಿಯ ನಿರ್ದೇಶಕ ಡಾ.ರಮಣ್​ ಎಂ ಹುಲಿನಾಯ್ಕರ್​, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​. ಪಾಟೀಲ್​, ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಹರೇಂದ್ರಕುಮಾರ್​ ಇದ್ದರು.
Published on

ಕೋಲ್ಕತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟೆನಿ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ವಿರೋಧಿಸಿ ಪ್ರತಿಭಟನೆ



ತುಮಕೂರು: ಕೋಲ್ಕತದ ಆರ್​.ಜಿ.ಕರ್​ ವೈದ್ಯಕಿಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ಅಮಾನುಷಾ ಹತ್ಯೆ ಹಾಗೂ ಪ್ರತಿಭಟನೆ ನಿರತರು ವೈದ್ಯರನ್ನು ಗುರಿಯಾಗಿಸಿಕೊಂಡು ಗುಂಪೊಂದು ಹಲ್ಲೆ ಮಾಡಿರುವುದನ್ನು ಖಂಡಿಸಿ
ತುರ್ತು ಸೇವೆ ವಿಭಾಗ ಹೊರತುಪಡಿಸಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರರೋಗಿ
ವೈದ್ಯಕಿಯ ಸೇವೆ ಬಂದ್​ ಮಾಡಿ ಪ್ರತಿಭಟಿಸಿದರು.
ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಜಿಲ್ಲೆಯೆಲ್ಲೆಡೆ ಸರ್ಕಾರಿ ಮತ್ತು ಖಾಸಗಿ ಕ್ಲಿನಿಕ್​ಗಳು ಒಪಿಡಿ ಬಂದ್​ ಮಾಡಿದ್ದು, ಭಾನುವಾರ ಬೆಳಗ್ಗೆ 6ರ ವರೆಗೂ ಯಾವುದೇ ರೀತಿಯ ಒಪಿಡಿ ಸೇವೆಗಳು ಜಿಲ್ಲೆಯಾದ್ಯಂತ ಲಭ್ಯವಾಗದ ಹಿನ್ನೆಲೆಯಲ್ಲಿ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಆಸ್ಪತ್ರೆ ಬಳಗೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಡೆಂ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿಯೇ ಇತ್ತು.
ನಗರದ ಸಿದ್ಧಗಂಗಾ ಆಸ್ಪತ್ರೆ, ಸಿದ್ದಾರ್ಥ ಆಸ್ಪತ್ರೆ, ಶ್ರೀದೇವಿ ವೈದ್ಯಕಿಯ ಕಾಲೇಜುಗಳು ಸೇರಿದಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್​ಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್​ ಆಗಿರುವುದರಿಂದ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ
ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡಿದರು.
ಐಎಂಎ ಜಿಲ್ಲಾಧ್ಯಕ್ಷ ಡಾ.ಎಚ್​.ವಿ.ರಂಗಸ್ವಾಮಿ ಮಾತನಾಡಿ, ವೈದ್ಯಕಿಯ ಸಂಸ್ಥೆಗಳು ಮತ್ತು ವೈದ್ಯಕಿಯ ಸಿಬ್ಬಂದಿ ಅತಿ ಸೂಕ್ಷ$್ಮ ಪರಿಸ್ಥಿತಿಯಲ್ಲಿ ಆತಂಕದಿಂದ ಸೇವಾಕ್ಷೇತ್ರದಲ್ಲಿ ಅಭದ್ರತೆಯೊಂದಿಗೆ ಕರ್ತವ್ಯ ನಿರ್ವಹಿಸುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಆದ್ದರಿಂದ ಮಾನವೀಯ ಕಾಳಜಿಯ ಸೇವಾಕ್ಷೇತ್ರವನ್ನು ಕಲುಷಿತಗೊಳಿಸುವ ಈ ಪ್ರಯತ್ನಗಳನ್ನು ಮೊಳೆಕೆಯಲ್ಲೆ ನಿಷ್ಕ್ರಿಯಗೊಳಿಸದಿದ್ದಲ್ಲಿ ಮುಂದೆ ಅಪಾಯವಾಗಲಿದೆ ಎಂದರು. ಈ ನಿಟ್ಟಿನಲ್ಲಿ ಅಗತ್ಯ ಎಲ್ಲ ಕ್ರಮಗಳನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲು ನಮ್ಮ ಹಕ್ಕೊತ್ತಾಯವನ್ನು ದಾಖಲಿಸಲು ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ಎಲ್ಲ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಅವಧಿಯಲ್ಲಿ ತುರ್ತು ಮತ್ತು ಅಗತ್ಯ
ಸೇವೆಗಳ ಲಭ್ಯ ಇರುತ್ತವೆ ಎಂಂದರು.
ಕೋಲ್ಕತದ ಸರ್ಕಾರಿ ವೈದ್ಯಕಿಯ ಕಾಲೇಜಿನಲ್ಲಿ ಡಾ.ಮೌಮಿತ ದೇವನಾಥ್​ ಅವರ ಮೇಲಿನ ಅತಿಕ್ರೂರ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಭಾರತೀಯ ವೈದ್ಯಕಿಯ ಸಂಘ ಕರೆ ನೀಡಿರುವ ಒಂದು
ದಿನದ ಆರೋಗ್ಯ ಸೇವೆಗಳ ಬಂದ್​ಗೆ ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಸಂಶೋಧನ ಸಂಸ್ಥೆ ಕೂಡ ಬೆಂಬಲ ವ್ಯಕ್ತಪಡಿಸಿತು.

ಸಂಘದ ರ್ನಿಣಯಕ್ಕೆ ಬೆಂಬಲ
ತುಮಕೂರು: ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ವೈದ್ಯಕಿಯ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಶನಿವಾರ ಶ್ರೀದೇವಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್​ಗಳು ಪ್ರತಿಭಟಿಸಿದರು.
ಶ್ರೀ ದೇವಿ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಲ್​.ಹರೇಂದ್ರಕುಮಾರ್​ ಮಾತನಾಡಿ, ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆಯನ್ನು ನಮ್ಮ ಕಾಲೇಜಿನ ಎಲ್ಲ ಸಿಬ್ಬಂದಿ ಖಂಡಿಸುತ್ತೇವೆ. ಭಾರತೀಯ ವೈದ್ಯಕಿಯ ಸಂಘ ತೆಗೆದುಕೊಳ್ಳುವ ರ್ನಿಣಯಗಳಲ್ಲಿ ನಮ್ಮ ಸಹಮತವಿರುತ್ತದೆ. ಈ ಘಟನೆ ಖಂಡಿಸಿ ಆ.19ರಂದು ಸಂಜೆ 6.30ಕ್ಕೆ ಮೇಣದ ಬತ್ತಿ ಮೂಲಕ ಮೃತ ವೈದ್ಯ ವಿದ್ಯಾರ್ಥಿಗೆ ಶಾಂತಿ ಕೋರಲಾಗುವುದು ಎಂದು ತಿಳಿಸಿದರು. ಶ್ರೀದೇವಿ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಕೆ.ಮೋಹನ್​ಕುಮಾರ್​, ಶ್ರೀದೇವಿ ಆಸ್ಪತ್ರೆಯ ಸಿ.ಎ.ಒ ಪ್ರದಿಪ್​ಕುಮಾರ್​ ವೆಗ್ಗಿ, ಶ್ರೀದೇವಿ ಪ್ಯಾರಾಮೆಡಿಕಲ್​ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಕೃಷ್ಣ,
ಡಾ.ಕಲ್ಲೇಶಪ್ಪ, ಶ್ರೀದೇವಿ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕರಾದ ಶೀಲಾ ಇದ್ದರು.

ಶೀಘ್ರ ಮತ್ತು ನ್ಯಾಯ ಸಮ್ಮತ ತೀರ್ಪಿಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಒಂದು ದಿನ ಒಪಿಡಿ ಸೇವೆ ಬಂದ್​ ಮಾಡಲಾಗಿದೆಯೇ ಹೊರತು, ತುರ್ತು ಚಿಕಿತ್ಸೆಗಳಿಗೆ ಬರುವ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ನಾವು ಇಷ್ಟೆಲ್ಲಾ ಸಮಾಜದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ. ಆದರೆ ನಮ್ಮ ಕಷ್ಟ ಮಾತ್ರ ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ.

-ಡಾ.ಜಿ.ಎಸ್​.ಶ್ರೀಧರ್​ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net