ಮಹಿಳೆ ಪಿತ್ತಕೋಶದಿಂದ 861 ಕಲ್ಲು ಹೊರ ತೆಗೆದ ವೈದ್ಯರು

15
Published on

ಮೈಸೂರು: ನಗರದ ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣದಲ್ಲಿ 55 ವರ್ಷದ ಮಹಿಳೆಯೊಬ್ಬರ ಗಾಲ್ ಬ್ಲಾಡರ್ (ಪಿತ್ತಕೋಶ)ನಿಂದ 861 ಕಲ್ಲುಗಳನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ತೀವ್ರ ಹೊಟ್ಟೆನೋವು ಹಾಗೂ ಜಾಂಡಿಸ್ ಕಾಯಿಲೆ ಇದೆ ಎಂದು ಇತ್ತೀಚೆಗೆ ಆಸ್ಪತ್ರೆಗೆ ಮಹಿಳೆ ಆಗಮಿಸಿದ್ದು, ತಪಾಸಣೆ ಮಾಡಿದ ಬಳಿಕ ಗಾಲ್ಬ್ಲಾಡರ್ ಹಾಗೂ ಬೈಲ್ಡಕ್ಟ್ ಎರಡರಲ್ಲಿ ಕೂಡ ಕಲ್ಲುಗಳು ಇರುವುದು ದೃಢಪಟ್ಟಿತು.

ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ನಿಖಿಲ್ ಕುಮಾರ್ ಜೋಗೆ ಹಾಗೂ ಲ್ಯಾಪರೊಸ್ಕೋ ಪಿಕ್ ಸೀನಿಯರ್ ಸರ್ಜನ್‌ಡಾ.ಆರ್.ಎಂ. ಅರವಿಂದ್ ಅವರ ನೇತೃತ್ವದಲ್ಲಿ ಲ್ಯಾಪರೋಸ್ಕೋ ಪಿಕ್ ಗಾಲ್ ಬಾರ್ಡರ್ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, 861 ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಮರುದಿನವೇ ಮಹಿಳೆ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net