ವೈದ್ಯರ ಸೇವೆ ಅತ್ಯಂತ ಮಹತ್ವದ್ದು

Oplus_0
ಹುಲಸೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು ವೈದ್ಯರನ್ನು ಸನ್ಮಾನಿಸಿ ಆಶೀರ್ವದಿಸಿದರು. ಆಡಳಿತ ಅಧಿಕಾರಿ ಡಾ.ಶಶಿಕಾಂತ ಕನಾಡೆ, ಡಾ.ಮಾಜೀದ್, ಡಾ.ಅರ್ಚನಾ, ಪ್ರವೀಣ ಕಾಡಾದಿ, ನಟರಾಜ ಆದೆಪ್ಪ ಇತರರಿದ್ದರು.
Published on

ಹುಲಸೂರು: ದೇಶ ಕಾಯುವ ಯೋಧರ ಸೇವೆ ಎಷ್ಟು ಮಹತ್ವದ್ದು, ವೈದ್ಯರ ಸೇವೆ ಕೂಡ ಅಷ್ಟೇ ಮಹತ್ವ ಅಮೋಘವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ನಿಮಿತ್ತ ಭಾಲ್ಕಿ ಹಿರೇಮಠ ಸಂಸ್ಥಾನ ಮಠದಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಸಾಮಾನ್ಯ ಜನರ ಆರೋಗ್ಯ ಕಾಪಾಡುವುದು ವೈದ್ಯರ ಕರ್ತವ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರ ಜೀವ ಉಳಿಯಬೇಕಾದರೆ ವೈದ್ಯರ ಮತ್ತು ಸಿಬ್ಬಂದಿ ಪಾತ್ರ ಮಹತ್ವದಾಗಿದೆ. ಅವರ ಸೇವೆ ಪರಿಗಣಿಸಿ ಅಂದಿನಿಂದ ನಮ್ಮ ಶ್ರೀಮಠದಿಂದ ಪ್ರತಿವರ್ಷ ವೈದ್ಯರ ದಿನದಂದು ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಇಲ್ಲಿನ ಸಿಬ್ಬಂದಿ ಒಳ್ಳೆಯ ಸೇವೆ ಸಲ್ಲಿಸುತ್ತಿರುವುದು ಸಂತಸ ತಂದಿದೆ. ಯಾರಿಗೂ ತಾರತಮ್ಯ ಮಾಡದೆ ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಕೋರಿದರು.

ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಶಶಿಕಾಂತ ಕನಾಡೆ, ಡಾ.ಮಾಜೀದ್, ಡಾ.ಅರ್ಚನಾ, ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ನಟರಾಜ ಆದೆಪ್ಪ ಆಸ್ಪತ್ರೆ ಸಿಬ್ಬಂದಿ ಇತರರಿದ್ದರು.

ಶ್ರೀಗಳು ಎಲ್ಲ ಸಿಬ್ಬಂದಿಗಳಿಗೆ ಶಾಲು ಹೊದಿಸಿ ಆಶೀರ್ವದಿಸಿ ನೆನಪಿನ ಕಾಣಿಕೆ ನೀಡಿದರು. ಸರ್ಕಾರಿ ಆಸ್ಪತ್ರೆಗೆ ಪ್ರಥಮ ಬಾರಿಗೆ ಆಗಮಿಸಿರುವ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net