ಕೋಲ್ಕೊತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆಸಿಗದ ನ್ಯಾಯ ಖಂಡಿಸಿ ವೈದ್ಯರ ಉಪವಾಸ ಸತ್ಯಾಗ್ರಹ

mng- oct 15- IMA PRESIDENT
ಮಂಗಳೂರು ಅತ್ತಾವರದಲ್ಲಿರುವ ಐಎಂಎ ಐಎಂಎ ಭವನದಲ್ಲಿ ಮಂಗಳವಾರ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಒಂದು ದಿನ ಮೌನ ಉಪವಾಸ ಸತ್ಯಾಗ್ರಹ ನಡೆಸಿದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೋಲ್ಕತ್ತಾದ ಆರ್‌ಜಿ ಕಾರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಸಂಭವಿಸಿ ತಿಂಗಳು ಕಳೆದರೂ ಪ್ರಕರಣಕ್ಕೆ ನ್ಯಾಯ ಸಿಗದಿರುವುದನ್ನು ಖಂಡಿಸಿ ಐಎಂಎ ಮಂಗಳೂರು ಘಟಕ, ಯುವ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ನಗರದ ಅತ್ತಾವರದಲ್ಲಿರುವ ಐಎಂಎ ಭವನದಲ್ಲಿ ಮಂಗಳವಾರ ಒಂದು ದಿನ ಮೌನ ಉಪವಾಸ ಸತ್ಯಾಗ್ರಹ ಜರುಗಿತು.
ಐಎಂಎ ಭವನದಲ್ಲಿ ಸಾಂಕೇತಿಕವಾಗಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ನೂರಾರು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದರು
ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ರಂಜನ್ ಆರ್.ಕೆ., ಕಾರ್ಯದರ್ಶಿ ಅವಿನ್ ಆಳ್ವ, ಮಾಜಿ ಅಧ್ಯಕ್ಷರಾದ ಡಾ.ವೇಣುಗೋಪಾಲ್, ಕೆ.ಆರ್.ಕಾಮತ್, ಡಾ.ಅಣ್ಣಯ್ಯ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
ಐಎಂಎ ಕೇಂದ್ರ ಸಂಘಟನೆಯು ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ನೀಡಿರುವ ಕರೆಯನ್ವಯ ಮಂಗಳೂರು ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net