

ಉಡುಪಿ: ಪ್ರತಿಯೊಬ್ಬರೂ ಜೀವನ ಪರ್ಯಂತ ವಿದ್ಯಾರ್ಥಿಗಳಾಗಿರುತ್ತಾರೆ. ಪ್ರತಿದಿನ ಹೊಸತು ಕಲಿಯುತ್ತಿರಬೇಕು. ನಮ್ಮಲ್ಲಿರುವ ವಿದ್ಯಾರ್ಥಿ ಕಳೆದುಹೋಗಬಾರದು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಬಿದ್ಯಾಳ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಟಕ, ಸಂಸತಿ ವಿಶ್ವಪ್ರತಿಷ್ಠಾನ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಆಶ್ರಯದಲ್ಲಿ ನಡೆದ ವೈದ್ಯರ ದಿನ, ಲೆಕ್ಕಪರಿಶೋಧಕರ ದಿನ ಹಾಗೂ ಪತ್ರಿಕಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ಹಾಗೂ ಲೆಕ್ಕಪರಿಶೋಧಕರು ಅಪಾರಶ್ರಮ ವಹಿಸಿ ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಾರೆ. ಪತ್ರಿಕಾರಂಗ ಪ್ರಜಾಪ್ರಭುತ್ವದ 4ನೇ ಅಂಗವಾಗಿದ್ದು, ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ತಪು$್ಪಗಳಾದರೆ ಅದನ್ನು ಬೆಟ್ಟು ಮಾಡುವುದು ಪತ್ರಿಕೆಗಳ ಕಾರ್ಯವಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಆಯಾ ವೃತ್ತಿಗಳನ್ನು ಪ್ರಾಮಾಣಿಕವಾಗಿ ಕೆಲಸದ ಬದ್ಧತೆಯಿಂದ ಮಾಡಿದಾಗ ಸಮಾಜದ ಆರೋಗ್ಯವೂ ಸುಧಾರಿಸುತ್ತದೆ. ಜಿಲ್ಲೆಯಲ್ಲಿರುವ ಸಾಹಿತ್ಯ, ಯಕ್ಷಗಾನದ ಸಾಧಕರನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನ ನಡೆಯಬೇಕು ಎಂದರು.
ಸಂಸತಿ ವಿಶ್ವಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕಸಾಪ ತಾಲೂಕು ಕಾರ್ಯದರ್ಶಿ ರವಿರಾಜ್, ಮಲಬಾರ್ ಗೋಲ್ಡ್ ಶಾಖಾ ವ್ಯವಸ್ಥಾಪಕ ಹಫೀಜ್ ರೆಹಮಾನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಅಶೋಕ್ ಕುಮಾರ್ ಹಾಗೂ ಡಾ. ಛಾಯಾಲತಾ, ಲೆಕ್ಕಪರಿಶೋಧಕರಾದ ಕೆ. ಸುರೇಂದ್ರ ನಾಯಕ್, ಪಿ. ಚಂದ್ರಮೋಹನ್ ಹಂದೆ, ಪರ್ತಕರ್ತರಾದ ಸುಭಾಶ್ಚಂದ್ರ ವಾಗ್ಲೆ ಹಾಗೂ ನಝೀರ್ ಪೊಲ್ಯ ಅವರನ್ನು ಸನ್ಮಾನಿಸಲಾಯಿತು. ಜನಾರ್ದನ ಕೊಡವೂರು ಸ್ವಾಗತಿಸಿ, ರಾವೇಂದ್ರ ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.