

ವಿಜಯಪುರ: ನಗರ ಹೊರ ವಲಯದ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.
ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ, ವೈದ್ಯರ ದಿನಾಚರಣೆ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆ ಪ್ರಾಚಾಯೆರ್ ವಿಜಯಲಕ್ಷಿ$್ಮ ಪಟ್ಟೇದ ಮಾತನಾಡಿ, ತಮ್ಮ ವೈಯಕ್ತಿಕ ಜೀವನದ ನಡೆವೆಯೂ ರೋಗಿಗಳ ಜೀವ ಉಳಿಸುವ ಅವರಿಗೆ ವೈದ್ಯೋ ನಾರಾಯಣ ಹರಿ ಎಂಬ ಎಂದು ಸಂಬೋಧಿಸಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ವೈದ್ಯರ ವೇಷಭೂಷಣ ಧರಿಸಿ ಗಮನ ಸೆಳೆದರು. ಶಾಲೆಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಶಾರದಾ ಪಾಟೀಲ ಮತ್ತು ಡಾ. ಲಲಿತಾ ಅರಳಿಕಟ್ಡಿ ಅವರಿಗೆ ಶಾಲೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಾಲೆ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ, ಬಸವರಾಜ ಸುಗೂರ, ಸಂಸ್ಥೆ ಆಡಳಿತಾಧಿಕಾರಿ ಸದಾನಂದ ದೇಸಾಯಿ, ಶಿವಾನಂದ ನೀಲಾ, ಎಂ.ಎಂ. ಸಜ್ಜನ, ಶಾಲೆಯ ಸಿಎಒ ಎಚ್. ವೆಂಕಟೇಶ ಮತ್ತಿತರರಿದ್ದರು.