ಜೈಂಟ್ಸ್ ಸ್ಕೂಲ್​ನಲ್ಲಿ ವೈದ್ಯರ ದಿನಾಚರಣೆ

New Gaints School New
Published on

ಹುಬ್ಬಳ್ಳಿ : ಜೈಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಜೈಂಟ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್​ನಲ್ಲಿ ಮಂಗಳವಾರದಂದು ವೈದ್ಯರ ದಿನ ಹಾಗೂ ಚಾರ್ಟರ್ಡ್ ಅಕೌಂಟಂಟ್ ದಿನ ಆಚರಿಸಲಾಯಿತು.

ಅತಿಥಿಯಾಗಿದ್ದ ಹಿರಿಯ ಲೆಕ್ಕಪರಿಶೋಧಕರಾದ ಅಕ್ಷಯ ಕುಮಾರ ಸಿಂಘಿ ಮಾತನಾಡಿ, ಸಿಎ ಆಗುವ ಹಾದಿ ಸುಲಭವಲ್ಲ, ಅದು ಅತಿ ಹೆಚ್ಚು ಸವಾಲಿನದು ಎಂದರು.

ಭಾರತದ ತೆರಿಗೆ ಮತ್ತು ಆರ್ಥಿಕತೆಯ ಬಗ್ಗೆ ಸಿಎ ಗಳಿಗೆ ಆಂತರಿಕ ಮತ್ತು ಬಾಹ್ಯ ಜ್ಞಾನ ತಿಳಿದಿದೆ. ಸಾಧನೆ ಎಂಬುದು ಕೇವಲ ಅಂಕ ಮತ್ತು ಪ್ರಮಾಣಪತ್ರಗಳಲ್ಲಿರುವದಿಲ್ಲ. ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಯಶಸ್ಸಿನ ಅಡಿಪಾಯಯದ ಗುಟ್ಟು ಎಂದು ಹೇಳಿದರು.

ಮತ್ತೊಬ್ಬ ಅತಿಥಿ ಡಾ. ಗಿರೀಶ ಬಾಬು ಮಾತನಾಡಿ, ಮಕ್ಕಳು ಆರೋಗ್ಯದ ಕಡೆ ಗಮನಕೊಡಬೇಕು. ಕೇವಲ ದೈಹಿಕ ಆರೋಗ್ಯವಲ್ಲ, ಮಾನಸಿಕ ಆರೋಗ್ಯದ ಕಡೆಗೂ ಗಮನಕೊಡಿ ಎಂದು ಸಲಹೆ ನೀಡಿದರು.

ಸಿಎ ವಿನಾಯಕ ಕಾಟಿಗರ, ಸಿಎ ಎಂ.ಕೆ. ಬಾಬಾಜಿ ಹಾಗೂ ಡಾ. ಸಂಜಯ ಕಲಬುರ್ಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಶುರಾಮ ಊಟವಾಲೆ ಮಾತನಾಡಿ, ಮಕ್ಕಳು ಭವಿಷ್ಯದಲ್ಲಿ ಯಾವುದೇ ವೃತ್ತಿಪರರಾಗಿರಿ. ಎಲ್ಲದಕ್ಕೂ ಮೊದರು ಮಾನವಿಯ ಮೌಲ್ಯಗಳನ್ನು ಕಲಿಯಿರಿ. ತಂದೆ, ತಾಯಿ, ಗುರು- ಹಿರಿಯರನ್ನು ಗೌರವಿಸಿರಿ ಹಾಗೂ ನಿಮ್ಮ ವೃತ್ತಿಯನ್ನು ನೀವು ಕಾಯಕವೇ ಕೈಲಾಸವೆಂದು ತಿಳಿದು ಕೆಲಸ ಮಾಡಿ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಆರ್. ರವಿ, ಸಿಎ ಅಮಿತ ಬಾಬಾಜಿ, ಡಾ. ಮಿಲಿಂದ ಗಲಗಲಿ, ಜಿ.ಎಸ್. ನಾಯ್ಕ, ಆಡಳಿತಾಧಿಕಾರಿ ಉಮಾ ಪಾಟೀಲ, ಪ್ರಾಚಾರ್ಯ ಬಸವರಾಜ ಚಟ್ನಿ, ಪರೀಕ್ಷಿತ್ ರಾಣ್ಯ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net