ವೈದ್ಯರು ಸಮಾಜದ ಹೃದಯವಿದ್ದಂತೆ : ಡಾ.ಗೋಪಾಲಕೃಷ್ಣ ವಿಶ್ಲೇಷಣೆ

New Project (2)
Published on

ಬೆಳ್ತಂಗಡಿ: ವೈದ್ಯರು ಸಮಾಜದ ಹೃದಯವಿದ್ದಂತೆ. ತಾಲೂಕಿನ ಹಿರಿಯ ವೈದ್ಯರನ್ನು ಆಮಂತ್ರಿಸಿ ನಮ್ಮ ಆಸ್ಪತ್ರೆ ವತಿಯಿಂದ ಗೌರವಿಸುವುದರಲ್ಲಿ ನಾವು ಸಾರ್ಥಕ್ಯ ಮೆರೆಯುತ್ತೇವೆ ಎಂದು ಬೆನಕ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಹೇಳಿದರು.

ಉಜಿರೆ ಬೆನಕ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಿರೀಕ್ಷಿತವಾಗಿ ನಮ್ಮ ಆರೋಗ್ಯದಲ್ಲಿ ಏರುಪೇರಾದಾಗ ನಾವು ಮೊದಲು ಸಂಪರ್ಕಿಸುವುದು ವೈದ್ಯರನ್ನು. ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರನ್ನು ಸನ್ಮಾನಿಸಲಾಯಿತು. ಡಾ.ಗೋಪಾಲಕೃಷ್ಣ ದಂಪತಿಯ ಉಚಿತ ಚಿಕಿತ್ಸೆ ಯೋಜನೆಯಂತೆ ಹೃದಯ ಮತ್ತು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವ ರಾಮಕ್ಕು ಅವರ ಚಿಕಿತ್ಸೆಗೆ 60 ಸಾವಿರ ರೂ. ವೆಚ್ಚವನ್ನು ಆಸ್ಪತ್ರೆ ವತಿಯಿಂದ ಭರಿಸಲಾಯಿತು.

ಪಿಆರ್‌ಒ ಎಸ್.ಜಿ.ಭಟ್ ಸ್ವಾಗತಿಸಿದರು. ಡಾ.ನವ್ಯಾ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net