ವೈದ್ಯರು ದೇವರ ಸಮಾನ,ಶ್ರೀ ಬಸವಕುಮಾರ ಸ್ವಾಮೀಜಿ

CTD VIYADARA DINACHARANE-----
Published on

ಚಿತ್ರದುರ್ಗ: ಆರೋಗ್ಯವೇ ಭಾಗ್ಯ ಎಂಬುದು ಸಾರ್ವಕಾಲಿಕ ಸತ್ಯವೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕು ಮಾರ ಸ್ವಾಮೀಜಿ ಹೇಳಿದರು.

ವೈದ್ಯರ ದಿನಾಚರಣೆ ಅಂಗವಾಗಿ ಸೋಮವಾರ ನಗರದ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವೈದ್ಯ ದಿನಾಚರಣೆಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಸಿಎಂ,ಖ್ಯಾತ ವೈದ್ಯ ಡಾ.ಬಿದನ್ ಚಂದ್ರರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವ ರು, ರೋಗಿಗೆ ಚಿಕಿತ್ಸೆ ನೀಡಿ ಆತನನ್ನು ಗುಣಪಡಿಸುವುದು ವೈದ್ಯರ ಕರ್ತವ್ಯ.ಅದಕ್ಕಾಗಿ ವೈದ್ಯರನ್ನು ನಾರಾಯಣ ಹರಿ ಎಂದು ದೇವರ ಸ ಮಾನವಾಗಿ ಕಾಣುತ್ತಾರೆ ಎಂದರು.

ಕಾರ‌್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾಕೂಟದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಅನ ನ್ಯ ಸಾಧನೆ ಮಾಡಿದ ಜಿಲ್ಲೆಯ ಹಿರಿಯ ನೇತ್ರ ತಜ್ಞರಾದ ಡಾ.ಪ್ರಭುದೇವ ಹಾಗೂ ಡಾ.ಕೃಷ್ಣಮೂರ್ತಿ ಅವರನ್ನು ಗೌರವಿಸಲಾಯಿತು. ಕಾಲೇಜು ಅಧೀಕ್ಷಕ ಡಾ.ನಾಗೇಂದ್ರಗೌಡ,ಐಎಂಎ ಅಧ್ಯಕ್ಷ ಡಾ.ಪಾಲಾಕ್ಷಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net