ಜನತೆಯ ಸಂಜೀವಿನಿಯಾಗಿ ವೈದ್ಯರ ಸೇವೆ : ರೋಟರಿ ಜಿಲ್ಲಾ ಪೂರ್ವ ಸಹಾಯಕ ಗವರ್ನರ್ ಶಿವರಾಮ ಯೇನೆಕಲ್ಲು ಶ್ಲಾಘನೆ

New Project (36)
Published on

ಸುಬ್ರಹ್ಮಣ್ಯ: ಗ್ರಾಮೀಣ ಭಾಗದಲ್ಲಿ ಜನತೆಯ ಸೇವೆ ಮಾಡುವುದುದರ ಈ ಮೂಲಕ ಈ ಭಾಗದ ಜನತೆಯ ಸಂಜೀವಿನಿಯಾಗಿ ಕರ್ತವ್ಯ ನಿರ್ವಹಿಸುವುದು ಶ್ಲಾನೀಯ ಕಾರ್ಯ. ವೈದ್ಯರು ನಮ್ಮ ಆರೋಗ್ಯ ರಕ್ಷಣೆ ಮಾಡುವ ದೇವರು ಎಂದು ರೋಟರಿ ಜಿಲ್ಲಾ ಪೂರ್ವ ಸಹಾಯಕ ಗವರ್ನರ್ ಶಿವರಾಮ ಯೇನೆಕಲ್ಲು ಹೇಳಿದರು.

ರೋಟರಿ ಕ್ಲಬ್ ಸುಬ್ರಹ್ಮಣ್ಯದ ವತಿಯಿಂದ ಬುಧವಾರ ನಡೆದ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.

ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಭಾಗವಾದ ನೆಟ್ಟಣ ಮತ್ತು ಯೇನೆಕಲ್‌ನಲ್ಲಿ ಸುಮಾರು 20 ವರ್ಷಗಳಿಂದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬರುತ್ತಿರುವ ಡಾ.ಮುರಳಿ ಅರಂಪಾಡಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್., ಪೂರ್ವ ರೋಟರಿ ಜಿಲ್ಲಾ ಗವರ್ನರ್ ರಾಮಕಷ್ಣ ಮಲ್ಲಾರ, ಪೂರ್ವಾಧ್ಯಕ್ಷರಾದ ಮಾಯಿಲಪ್ಪ ಸಂಕೇಸ, ಗಿರಿಧರ ಸ್ಕಂದ, ವೆಂಕಟೇಶ್ ಎಚ್.ಎಲ್.ಪ್ರಶಾಂತ್ ಕೋಡಿಬೈಲು, ಭರತ್ ನೆಕ್ರಾಜೆ, ನಿಯೋಜಿತ ಕಾರ್ಯದರ್ಶಿ ಭವಾನಿಶಂಕರ ಪೂಂಬಾಡಿ, ಇನ್ನರ್‌ವ್ಹೀಲ್ ಪೂರ್ವಾಧ್ಯಕ್ಷೆ ಜಾನಕಿ ವೆಂಕಟೇಶ್, ನಿರ್ದೇಶಕ ಗಿರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net