ವೈದ್ಯಕೀಯ ಶಾಸ್ತ್ರ ತಜ್ಞರ ದಿನಾಚರಣೆ ಮೂವರು ವೈದ್ಯರಿಗೆ ಜೀವಮಾನ ಸಾಧನೆ ಪ್ರಶಸ್ತಿ

mng--20 Jan Doctors sanmana
Published on

ಮಂಗಳೂರು: ಭಾರತೀಯ ವೈದ್ಯಕೀಯ ಶಾಸ್ತ್ರ ತಜ್ಞರ ಸಂಘ ದ.ಕ. ಜಿಲ್ಲಾ ಮಂಗಳೂರು ಶಾಖೆಯ ಆಶ್ರಯದಲ್ಲಿ ವೈದ್ಯಕೀಯ ಶಾಸ್ತ್ರ ತಜ್ಞರ ದಿನಾಚರಣೆ ಶುಕ್ರವಾರ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಡಾ.ಪ್ರಭಾ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.


ಈ ಸಂದರ್ಭ ನಗರದ 3 ಖ್ಯಾತ ವೈದ್ಯರಾದ ಡಾ. ದೇವದಾಸ್ ರೈ, ಡಾ.ಇ.ವಿ.ಎಸ್. ಮೆಬನ್, ಡಾ. ಹೆರಾಲ್ಡ್ ಮಸ್ಕರೇನ್ಸ್ ಅವರು ವೈದ್ಯಕೀಯ ಶಾಸ್ತ್ರಕ್ಕೆ ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಡಾ.ಕಿಸ್ಟೋಪರ್ ಪಾಯಸ್, ಡಾ.ಸಿಡ್ನಿ ಡಿಸೋಜ, ಡಾ. ಮೋಹನ್ ಪೈ, ಡಾ. ಮೊಹಮ್ಮದ್ ಇಸ್ಮಾಯಿಲ್ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಖ್ಯಾತ ನರರೋಗ ಶಾಸ್ತ್ರ ತಜ್ಞ ಹಾಗೂ ಕೆ.ಎಂ.ಸಿ. ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಕೆ.ಆರ್. ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ.ಐ.ಜಿ. ಭಟ್, ಡಾ.ಜೋ ವರ್ಗಿಸ್, ಡಾ. ಎಂ.ವಿ. ಪ್ರಭು, ಡಾ. ಕೃಷ್ಣ ಮೂರ್ತಿ ಅವರು ಅಗಲಿದ ಡಾ. ಕೆ.ಆರ್. ಶೆಟ್ಟಿ ಅವರ ಒಡನಾಟವನ್ನು ಸ್ಮರಿಸಿದರು. ಸಂಘದ ಕಾರ್ಯದರ್ಶಿ ಡಾ. ಹಾರೂನ್ ಹುಸೈನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net