ವೈದ್ಯರು ಜೀವ ರಕ್ಷಕರು

h1-sankalpa shetter
Published on

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆ ಬಳಿಯ ವೇದ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ರಾಷ್ಟ್ರೀಯ ವೈದ್ಯರ ದಿನ ಹಾಗೂ ಲೆಕ್ಕಪರಿಶೋಧಕರ ದಿನವನ್ನು ಮಂಗಳವಾರ ಆಚರಿಸಲಾಯಿತು.

ಎಸ್‌ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಮಾತನಾಡಿ, ವೈದ್ಯರ ಸೇವೆ ಸದಾ ಸ್ಮರಣೀಯ. ತಮ್ಮ ಜೀವವನ್ನು ಪಣಕ್ಕಿಟ್ಟು ರೋಗಿಗಳ ಜೀವವನ್ನು ಉಳಿಸುವವರು. ನಮ್ಮ ದೇಶ ಸುಭಿಕ್ಷವಾಗಿರುವುದಕ್ಕೆ ಲೆಕ್ಕಪರಿಶೋಧಕರ ಸಲಹೆ ಕಾರಣ ಎಂದು ಸ್ಮರಿಸಿದರು.

ಡಾ. ಅಸಾದುಲ್ಲಾ ಕಾರಿಗಾರ ಮಾತನಾಡಿ, ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಬೇಕು. ನಿಜವಾದ ಆಸ್ತಿ ಎಂದರೆ ಆರೋಗ್ಯ ಎಂದರು.

ಲೆಕ್ಕಪರಿಶೋಧಕ ಕಾರ್ತಿಕ ಶೆಟ್ಟಿ ಮಾತನಾಡಿ, ಯಾವುದೇ ಒಂದು ಸಂಸ್ಥೆ ಯಶಸ್ಸು ಕಾಣಬೇಕಾದರೆ ಆರ್ಥಿಕ ಸಲಹೆಗಾರರ ಅವಶ್ಯಕತೆ ಬಹಳ ಇದೆ ಎಂದರು.

ಈ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಡಾ. ರಿಹಾನ ಕಾರಿಗಾರ, ಪ್ರಾಚಾರ್ಯ ಬಿನಾ ಜಾನ್, ಆಡಳಿತಾಧಿಕಾರಿ ಪರಮ್ ಕಿತ್ಲಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net